SIR:ಕರ್ನಾಟಕದಲ್ಲಿ 1ಕೋಟಿ 10 ಲಕ್ಷ ಮತದಾರರು ಕರಡು ಪಟ್ಟಿಯಿಂದ ಡಿಲೀಟ್
ಬೆಂಗಳೂರು:ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿದ ಪ್ರಕಾರ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ 99.56% ಪೂರ್ಣಗೊಂಡಿದೆ. 03-08-2026ರ ಸಂಜೆ 4 ಗಂಟೆಯ ವರದಿಯ ಪ್ರಕಾರ, 16-06-2026ರ ಅಂತಿಮ ಮತದಾರರ ಪಟ್ಟಿಯಲ್ಲಿ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದಾರೆ.
ಎಲ್ಲಾ ಮತದಾರರಿಗೂ ಗಣತಿ ನಮೂನೆಗಳು ಮುದ್ರಿಸಿ, ಬೂತ್ ಮಟ್ಟದ ಅಧಿಕಾರಿಗಳಿಗೆ ವಿತರಣೆಯಾಗಿದೆ.ವಿತರಿಸಿದ ಗಣತಿ ನಮೂನೆ 5,54,32,314, ಡಿಜಿಟೈಸ್ ಆದ ಗಣತಿ ನಮೂನೆ + ASDDO 5,51,91,134 - 99.56% , ಡಿಜಿಟೈಸ್ ಆದ ಗಣತಿ ನಮೂನೆ 4,41,31,846, ASDDO ಗುರುತಾದವರು 1,10,59,288, ಶಾಶ್ವತವಾಗಿ ಸ್ಥಳಾಂತರ 66,23,832, ಮೃತಪಟ್ಟವರು 16,21,446, ಪತ್ತೆಯಾಗದ/ಅನುಪಸ್ಥಿತ 16,18,630,ಈಗಾಗಲೇ ನೊಂದಾಯಿತ 6,78,213, ಇತರೆ 5,17,167, ಮತದಾರರು ಆನ್‌ಲೈನ್ ಮೂಲಕ ಸಲ್ಲಿಸಿದ ಗಣತಿ ನಮೂನೆಗಳ ಸಂಖ್ಯೆ 6,85,711 ಆಗಿದೆ. ಇನ್ನೂ 2,41,180 ಗಣತಿ ನಮೂನೆಗಳು ಡಿಜಿಟೈಸ್ ಆಗಬೇಕಿದೆ.
ತಪ್ಪಾಗಿ ASDDO ಎಂದು ಗುರುತಾಗಿದ್ದರೆ ಮತದಾರರು 08-08-2026ರ ಒಳಗೆ BLO/ERO ಮೂಲಕ ತಿದ್ದುಪಡಿ ಮಾಡಿಸಿಕೊಳ್ಳಬಹುದು. ASDDO ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ಹಾಗೂ BLOಗಳಿಗೆ ಪರಿಶೀಲನೆಗೆ ನೀಡಲಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
