Kodagu

SIR: ವಿರಾಜಪೇಟೆ ಕ್ಷೇತ್ರದಲ್ಲಿ 1.07 ಲಕ್ಷ ನಮೂನೆ ವಿತರಣೆ

admincoorgdaily

SIR: ವಿರಾಜಪೇಟೆ ಕ್ಷೇತ್ರದಲ್ಲಿ 1.07 ಲಕ್ಷ ನಮೂನೆ ವಿತರಣೆ

ವಿರಾಜಪೇಟೆ :ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ - 2026 (SIR) ಕಾರ್ಯವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಆರಂಭಿಸಲಾಗಿದೆ.

ಮತದಾರರ ನೋಂದಣಾಧಿಕಾರಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಕ್ಷೇತ್ರದ 277 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಜೂನ್ 30 ರಿಂದ ಮನೆ-ಮನೆ ಭೇಟಿ ನೀಡಿ ಗಣತಿ ನಮೂನೆಯನ್ನು ವಿತರಿಸಲಾಗುತ್ತಿದೆ. - *ವಿತರಿಸಿದ ನಮೂನೆ*: 1,07,705 - 46.79% - *ಡಿಜಿಟಲೀಕರಣಗೊಂಡ ನಮೂನೆ*: 1,839 - 0.80% - *ಆನ್‌ಲೈನ್ ಮೂಲಕ ಸಲ್ಲಿಕೆ*: 125 ಮಂದಿ ತೆಗಿಸಿದ ಹೆಸರುಗಳ ವಿವರ: ಗೈರು - 2, ಸ್ಥಳಾಂತರ - 14, ಮರಣ - 16, ಡುಪ್ಲಿಕೇಟ್ - 4, ಇತರೆ - 1