SIR:ಕೊಡಗು ಜಿಲ್ಲೆಯಲ್ಲಿ 10,802 ಮತದಾರರು ಗೈರು
ಮಡಿಕೇರಿ:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯ ಕೊಡಗು ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿಗಳ ಕಾರ್ಯಾಲಯವು 01-08-2026 ರಂದು ಸಂಜೆ 4 ಗಂಟೆಗೆ ಬಿಡುಗಡೆ ಮಾಡಿದ ವರದಿ ಪ್ರಕಾರ, ಜಿಲ್ಲೆಯಲ್ಲಿ ಡಿಜಿಟಲೀಕರಣ ಕಾರ್ಯ ಶೇ.86.24 ರಷ್ಟು ಪೂರ್ಣಗೊಂಡಿದೆ.
ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಒಟ್ಟು 552 ಮತಗಟ್ಟೆಗಳಲ್ಲಿ BLO ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಒಟ್ಟು ಮತದಾರರ ಸಂಖ್ಯೆ 4,68,657, ಗಣತಿ ನಮೂನೆ ವಿತರಣೆ 4,68,657,ಗಣತಿ ನಮೂನೆ ಡಿಜಿಟಲೀಕರಣ 4,04,159, ಗಣತಿ ನಮೂನೆ ಸಲ್ಲಿಸದಿರುವವರ ವಿವರ ಒಟ್ಟು 64,498 ಮತದಾರರು. Absent/ ಶಾಶ್ವತವಾಗಿ ಸ್ಥಳಾಂತರ/ ಮೃತಪಟ್ಟು/ ಎರಡು ಕಡೆ ಹೆಸರು ಹೊಂದಿರುವ/ ಇತರೆ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸಿಲ್ಲ. ಮೃತಪಟ್ಟ ಮತದಾರರ ಸಂಖ್ಯೆ 13,687,ಶಾಶ್ವತವಾಗಿ ಸ್ಥಳಾಂತರಗೊಂಡವರು 34,110, ಎರಡು ಕಡೆ ಹೆಸರು ಹೊಂದಿರುವವರು 5,779,Absent ಮತದಾರರು, 10,802 ಇತರೆ ಕಾರಣ 123
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
