ಎಸ್ಐಆರ್: ವಿರಾಜಪೇಟೆ ಕ್ಷೇತ್ರದಲ್ಲಿ 13,501 ಮತದಾರರು ಶಾಶತ್ವ ಸ್ಥಳಾಂತರ

Jul 22, 2026 - 16:34
 0  35
ಎಸ್ಐಆರ್: ವಿರಾಜಪೇಟೆ ಕ್ಷೇತ್ರದಲ್ಲಿ 13,501 ಮತದಾರರು ಶಾಶತ್ವ ಸ್ಥಳಾಂತರ

ಮಡಿಕೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲೆಯ 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯ ಭರದಿಂದ ಸಾಗುತ್ತಿದೆ. ಜಿಲ್ಲಾ ನಗರಾಭಿವೃದ್ಧಿ ಕೋಶದ ಮತದಾರರ ನೋಂದಣಾಧಿಕಾರಿ ಕಚೇರಿ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಕ್ಷೇತ್ರದ 277 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮನೆ ಮನೆ ಸಮೀಕ್ಷೆ ಮತ್ತು ಗಣತಿ ನಮೂನೆ ವಿತರಣೆ ಕಾರ್ಯವು ಶೇ.100 ರಷ್ಟು ಪೂರ್ಣಗೊಂಡಿದೆ.

2,30,210 ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಇದರಲ್ಲಿ ಇದುವರೆಗೆ 1,71,553 ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, ಇದು ಶೇ.74.52 ರಷ್ಟಾಗಿದೆ. ಉಳಿದ ಶೇ.25.48 ರಷ್ಟು ಡಿಜಿಟಲೀಕರಣ ಕಾರ್ಯ ಆಗಸ್ಟ್ 8ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಆನ್‌ಲೈನ್ ಮೂಲಕ ಗಣತಿ ನಮೂನೆಯನ್ನು ಸಲ್ಲಿಸಿರುವ ಮತದಾರರ ಸಂಖ್ಯೆ ಕೇವಲ 787ಮಾತ್ರವಾಗಿದೆ. SIR ಪ್ರಕ್ರಿಯೆಯಲ್ಲಿ ಇದುವರೆಗೆ ಒಟ್ಟು 23,332 ಮತದಾರರ ಹೆಸರುಗಳನ್ನು* ವಿವಿಧ ಕಾರಣಗಳಿಗಾಗಿ ಗುರುತಿಸಲಾಗಿದೆ.ಸ್ಥಳಾಂತರ 13,501, ಮರಣ 5,393, ಗೈರು, 2,811 ಡುಪ್ಲಿಕೇಟ್ 1,606, ಇತರೆ 21.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0