ಎಸ್ಐಆರ್:ಕೊಡಗು ಜಿಲ್ಲೆಯಲ್ಲಿ 14,669 ಮತದಾರರು ಶಾಶ್ವತವಾಗಿ ಸ್ಥಳಾಂತರ
ಮಡಿಕೇರಿ:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯ ಕೊಡಗು ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ. ಕೊಡಗು ಜಿಲ್ಲೆಯ 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಒಟ್ಟು 552 ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ, ಗಣತಿ ನಮೂನೆಗಳನ್ನು ಮತದಾರರಿಗೆ ವಿತರಿಸಿ, ಭರ್ತಿ ಮಾಡಿಸಿ ಸಂಗ್ರಹಿಸಿದ್ದಾರೆ.
ಸಂಗ್ರಹಿಸಿದ ನಮೂನೆಗಳನ್ನು BLO App ನಲ್ಲಿ ಡಿಜಿಟಲೀಕರಣ ಮಾಡಲಾಗುತ್ತಿದೆ. ಒಟ್ಟು ಮತದಾರರ ಸಂಖ್ಯೆ 4,68,657, ಗಣತಿ ನಮೂನೆ ವಿತರಣೆ 4,68,657, ಗಣತಿ ನಮೂನೆ ಡಿಜಿಟಲೀಕರಣ 3,22,188 ,ಒಟ್ಟು ಗೈರು/ಸ್ಥಳಾಂತರ/ಮರಣ/ಡುಪ್ಲಿಕೇಟ್ ಮತದಾರರು 28,614,ಮೃತಪಟ್ಟ ಮತದಾರರು 9,469, ಶಾಶ್ವತವಾಗಿ ಸ್ಥಳಾಂತರಗೊಂಡವರು,14,669,ಎರಡು ಕಡೆ ಹೆಸರು ಹೊಂದಿರುವವರು 2,142 Absent 2,279 ಮತದಾರರು,ಇತರೆ ಕಾರಣಗಳಿಂದ ಸಲ್ಲಿಸದವರು 55.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
