Kodagu

ಎಸ್ಐಆರ್:ವಿರಾಜಪೇಟೆ ಕ್ಷೇತ್ರದಲ್ಲಿ 14950 ಮಂದಿ ಮತದಾರರು ಸ್ಥಳಾಂತರ

admincoorgdaily

ಎಸ್ಐಆರ್:ವಿರಾಜಪೇಟೆ ಕ್ಷೇತ್ರದಲ್ಲಿ 14950 ಮಂದಿ ಮತದಾರರು ಸ್ಥಳಾಂತರ

ಮಡಿಕೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯದಲ್ಲಿ 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಉತ್ತಮ ಪ್ರಗತಿ ಸಾಧಿಸಿದೆ. ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಡಗು ಜಿಲ್ಲೆಯಿಂದ ದಿನಾಂಕ: 23-07-2026 ಸಂಜೆ 4.05 ಗಂಟೆಯ ವರದಿ‌ಪ್ರಕಾರ, ಕ್ಷೇತ್ರದ ಒಟ್ಟು 277 ಮತಗಟ್ಟೆಗಳ ವ್ಯಾಪ್ತಿಯಲ್ಲಿ BLO ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಿದ್ದಾರೆ.

ಗಣತಿ ನಮೂನೆ ವಿತರಣೆ 2,30,210 ಗಣತಿ ನಮೂನೆ ಡಿಜಿಟಲೀಕರಣ 1,78,513,ಆನ್‌ಲೈನ್ ಮೂಲಕ ಗಣತಿ ನಮೂನೆ ಸಲ್ಲಿಸಿದ ಮತದಾರರ ಸಂಖ್ಯೆ 800, ಸ್ಥಳಾಂತರ 14,950, ಮರಣ 5,658,ಗೈರು/ಪತ್ತೆಯಾಗದವರು,3,186 ಡುಪ್ಲಿಕೇಟ್ 1,851,ಇತರೆ 31 25,676.