ಎಸ್ಐಆರ್:ಕರ್ನಾಟಕದಲ್ಲಿ 15 ಲಕ್ಷ 45 ಸಾವಿರ ಮಂದಿ ಮತದಾರರು ಶಾಶ್ವತ ಸ್ಥಳಾಂತರ

Jul 18, 2026 - 21:21
 0  1
ಎಸ್ಐಆರ್:ಕರ್ನಾಟಕದಲ್ಲಿ  15 ಲಕ್ಷ 45 ಸಾವಿರ ಮಂದಿ ಮತದಾರರು ಶಾಶ್ವತ ಸ್ಥಳಾಂತರ

ಬೆಂಗಳೂರು, ಜು.18: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ SIR ಕಾರ್ಯವು ಶೇ.55.16 ರಷ್ಟು ಪೂರ್ಣಗೊಂಡಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಶುಕ್ರವಾರ ಸಂಜೆ ಪ್ರಕಟಿಸಿದೆ. 16.06.2026 ರಂತೆ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರು‌ ಇದ್ದು, ಇವರಲ್ಲಿ ಈಗಾಗಲೇ .3,05,74,731 ಮಂದಿಯ ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

 ಮನೆ ಮನೆ ಸಮೀಕ್ಷೆಯು 30.06.2026 ರಿಂದ 08.08.2026 ರವರೆಗೆ ನಡೆಯುತ್ತಿದೆ. ಈ ಅವಧಿಯಲ್ಲಿ ಇದುವರೆಗೆ 5,45,46,593 EF ಗಳನ್ನು ವಿತರಿಸಲಾಗಿದ್ದು, ಇದು 98.40%* ಆಗಿದೆ. ರಾಜ್ಯದ 51,120 ಮತಗಟ್ಟೆಗಳಲ್ಲಿ 100% EF ವಿತರಣೆಯಾಗಿದ್ದು, ಇದು ಒಟ್ಟು ಮತಗಟ್ಟೆಗಳ ಶೇ.86.57 ಕ್ಕೆ ಸಮನಾಗಿದೆ. ಡಿಜಿಟಲೀಕರಣ ವಿಚಾರದಲ್ಲಿ 21 ಮತಗಟ್ಟೆಗಳು 100%‌ ಸಾಧನೆ ಮಾಡಿವೆ.

5,328 ಮತಗಟ್ಟೆಗಳು 90% ಕ್ಕಿಂತ ಹೆಚ್ಚು ಡೇಟಾವನ್ನು ಅಪ್ಲೋಡ್ ಮಾಡಿವೆ. ಮತದಾರರು ಸ್ವತಃ ಆನ್‌ಲೈನ್ ಮೂಲಕ 5,14,981 EF ಗಳನ್ನು ಸಲ್ಲಿಸಿದ್ದಾರೆ. ಇದು ಒಟ್ಟಿನಲ್ಲಿ ಶೇ.0.93 ಆಗಿದೆ. 26.76 ಲಕ್ಷ ಮತದಾರರು ASDDO: CEO ವರದಿಯ ಪ್ರಕಾರ 26,76,740 ಮಂದಿಯನ್ನು ASDDO ಎಂದು ಗುರುತಿಸಲಾಗಿದೆ. ಇದರಲ್ಲಿ 15,45,039 ಮಂದಿ ಶಾಶ್ವತವಾಗಿ ಸ್ಥಳಾಂತರ, 6,47,421 ಮಂದಿ ಮೃತರು, 3,32,102 ಮಂದಿ ಗೈರು/ಪತ್ತೆಯಾಗದವರು ಇದ್ದಾರೆ. 1,44,514 ಮಂದಿ ಈಗಾಗಲೇ ಬೇರೆಡೆ ದಾಖಲಾಗಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0