SIR:ವಿರಾಜಪೇಟೆ ಕ್ಷೇತ್ರದಲ್ಲಿ 19,900 ಮತದಾರರು ಸ್ಥಳಾಂತರ
ವಿರಾಜಪೇಟೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಗತಿಯಲ್ಲಿದೆ. ಮತದಾರರ ನೋಂದಣಾಧಿಕಾರಿ ಹಾಗೂ ಯೋಜನಾ ನಿರ್ದೇಶಕರ ಕಚೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಡಗು ಜಿಲ್ಲೆ ವತಿಯಿಂದ 01-08-2026 ರಂದು ಸಂಜೆ 4.05 ಗಂಟೆಯ ವರದಿ ಬಿಡುಗಡೆಯಾಗಿದೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಒಟ್ಟು 277 ಮತಗಟ್ಟೆಗಳಲ್ಲಿ BLO ಅಧಿಕಾರಿಗಳು ಮನೆ ಮನೆ ಭೇಟಿ ನೀಡುತ್ತಿದ್ದಾರೆ.ಗಣತಿ ನಮೂನೆ ವಿತರಣೆ 2,30,210,ಗಣತಿ ನಮೂನೆ ಡಿಜಿಟಲೀಕರಣ 1,95,432,ಆನ್ ಲೈನ್ ಮೂಲಕ ಗಣತಿ ನಮೂನೆ ಸಲ್ಲಿಸಿದ ಮತದಾರರು 827. ಗಣತಿ ನಮೂನೆ ಸಲ್ಲಿಸದಿರುವವರ ವಿವರ ಒಟ್ಟು 34,778 ಮತದಾರರು.ಗೈರು/ ಸ್ಥಳಾಂತರ/ ಮರಣ/ ಡುಪ್ಲಿಕೇಟ್/ ಇತರೆ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸಿಲ್ಲ.ಗೈರು 5,717,ಸ್ಥಳಾಂತರ 19,900, ಮರಣ 6,186, ಡುಪ್ಲಿಕೇಟ್ 2,897,ಇತರೆ 78
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
