ಕೊಡಗಿನಲ್ಲಿ SIR-2026 ಚುರುಕು: 69,399 ಎನ್ಯುಮರೇಶನ್ ಫಾರ್ಮ್ ವಿತರಣೆ

ಕೊಡಗಿನಲ್ಲಿ SIR-2026 ಚುರುಕು: 69,399 ಎನ್ಯುಮರೇಶನ್ ಫಾರ್ಮ್ ವಿತರಣೆ

*ಮಡಿಕೇರಿ*: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ - SIR 2026 (Special Intensive Revision) ಕಾರ್ಯಕ್ಕೆ ಕೊಡಗು ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ. 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಒಟ್ಟು 552 ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು (BLO) ಜೂನ್ 30, 2026ರಿಂದ ಜುಲೈ 29, 2026ರವರೆಗೆ ಮನೆ-ಮನೆಗೆ ಭೇಟಿ ನೀಡಿ ಮತದಾರರ ಗಣತಿ ನಮೂನೆ ವಿತರಿಸಿ, ಮಾಹಿತಿ ಸಂಗ್ರಹಿಸಲಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ ಪ್ರಕಾರ, ಇಲ್ಲಿಯವರೆಗೆ ಜಿಲ್ಲೆಯಲ್ಲಿ 69,399 ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಇದು ಶೇ.14.81ರಷ್ಟು ಪ್ರಗತಿ ಸಾಧಿಸಿದೆ. ಈ ಪೈಕಿ 1,214 ನಮೂನೆಗಳ ಡಿಜಿಟಲೀಕರಣ ಪೂರ್ಣಗೊಂಡಿದೆ - ಶೇ.0.26. ಆನ್‌ಲೈನ್ ಮೂಲಕ 175 ಮತದಾರರು ನಮೂನೆ ಸಲ್ಲಿಸಿದ್ದಾರೆ.

ಮರಣ

ಹೊಂದಿದವರು 9, ಸ್ಥಳಾಂತರಗೊಂಡವರು 2, ಡುಪ್ಲಿಕೇಟ್ ನೋಂದಣಿ 1 ಪತ್ತೆಯಾಗಿದೆ.