ಎಸ್ಐಆರ್: ಕೊಡಗು ಜಿಲ್ಲೆಯಲ್ಲಿ 26,598 ಮತದಾರರು ಶಾಶ್ವತವಾಗಿ ಸ್ಥಳಾಂತರ
admincoorgdaily

ಮಡಿಕೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯ ನಡೆಯುತ್ತಿದೆ. ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 552 ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಿ ಸಂಗ್ರಹಿಸಿದ್ದಾರೆ.
ಬಳಿಕ BLO App ನಲ್ಲಿ Digitization ಮಾಡಲಾಗುತ್ತಿದೆ. ಒಟ್ಟು ಮತದಾರರ ಸಂಖ್ಯೆ 4,68,657,ಗಣತಿ ನಮೂನೆ ವಿತರಣೆ 4,68,657,ಗಣತಿ ನಮೂನೆ ಡಿಜಿಟಲೀಕರಣ 3,79,114,ಮೃತಪಟ್ಟವರು 12,696,ಶಾಶ್ವತವಾಗಿ ಸ್ಥಳಾಂತರ 26,598, ಎರಡು ಕಡೆ ಹೆಸರು ಹೊಂದಿರುವವರು 3,990, Absent 5,909,ಇತರೆ ಕಾರಣ 67