ಎಸ್ಐಆರ್:ಕೊಡಗು ಜಿಲ್ಲೆಯಲ್ಲಿ 28,277 ಮಂದಿ ಮತದಾರರು ಸ್ಥಳಾಂತರ
admincoorgdaily

ಮಡಿಕೇರಿ:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯ ಕೊಡಗು ಜಿಲ್ಲೆಯಲ್ಲಿ ತೀವ್ರಗೊಂಡಿದೆ. ಜಿಲ್ಲಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿದ ದೈನಂದಿನ ಪ್ರಗತಿ ವರದಿಯ ಪ್ರಕಾರ, 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಒಟ್ಟು 552 ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆ ಭೇಟಿ ನೀಡಿ ಗಣತಿ ನಮೂನೆ ವಿತರಣೆ ಕಾರ್ಯ ಮುಗಿಸಿದ್ದಾರೆ.
ಒಟ್ಟು ಮತದಾರರ ಸಂಖ್ಯೆ 4,68,657,ಗಣತಿ ನಮೂನೆ ವಿತರಣೆ 4,68,657,ಗಣತಿ ನಮೂನೆ ಡಿಜಿಟಲೀಕರಣ, 3,86,580,ಮೃತಪಟ್ಟ ಮತದಾರರು 12,907, ಶಾಶ್ವತ ಸ್ಥಳಾಂತರ 28,277, ಎರಡು ಕಡೆ ಹೆಸರು ಹೊಂದಿರುವವರು 4,400, Absent ಮತದಾರರು,6,684 ಇತರೆ ಕಾರಣಗಳು 72