ಎಸ್ಐಆರ್:ವಿರಾಜಪೇಟೆ ಕ್ಷೇತ್ರದಲ್ಲಿ ASDDO ಅಡಿಯಲ್ಲಿ 31ಸಾವಿರ ಮತದಾರರು
ವಿರಾಜಪೇಟೆ:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಗತಿಯಲ್ಲಿದೆ. ಮತದಾರರ ನೋಂದಣಾಧಿಕಾರಿ ಕಚೇರಿ ಸೋಮವಾರ ಸಂಜೆ 4.05 ಕ್ಕೆ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಕ್ಷೇತ್ರ ವ್ಯಾಪ್ತಿಯ 277 ಮತಗಟ್ಟೆಗಳ ಬಿಎಲ್‌ಒ ಅಧಿಕಾರಿಗಳು ದಿನಾಂಕ 30-06-2026 ರಿಂದ 08-08-2026 ರವರೆಗೆ ಮನೆ ಮನೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸುತ್ತಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು 2,30,210 ಮತದಾರರಿಗೆ ಗಣತಿ ನಮೂನೆ ವಿತರಿಸಲಾಗಿದೆ. ಇದು ಶೇ.100 ರಷ್ಟಾಗಿದೆ. ಇದುವರೆಗೆ 1,91,266 ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಇದು ಶೇ.83.08 ರಷ್ಟಾಗಿದೆ. ಆನ್‌ಲೈನ್ ಮೂಲಕ ಗಣತಿ ನಮೂನೆ ಸಲ್ಲಿಸಿರುವ ಮತದಾರರ ಸಂಖ್ಯೆ 821 ಆಗಿದೆ. ಒಟ್ಟು ಗೈರು/ ಸ್ಥಳಾಂತರ/ ಮರಣ/ ಡುಪ್ಲಿಕೇಟ್/ ಇತರೆ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸದೇ ಇರುವ ಮತದಾರರ ಸಂಖ್ಯೆ 31,583 ಆಗಿದೆ. ಗೈರು 4,838, ಸ್ಥಳಾಂತರ 18,072, ಮರಣ 6,050, ಡುಪ್ಲಿಕೇಟ್ 2,569,ಇತರೆ: 54
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
