SIR: ಕೊಡಗಿನಲ್ಲಿ 3185 ಮಂದಿ ಮತದಾರರು ಸ್ಥಳಾಂತರ

Jul 16, 2026 - 19:02
 0  164
SIR: ಕೊಡಗಿನಲ್ಲಿ 3185 ಮಂದಿ ಮತದಾರರು ಸ್ಥಳಾಂತರ

ಮಡಿಕೇರಿ: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪರಿಷ್ಕರಣೆ SIR ಪ್ರಕ್ರಿಯೆಯಲ್ಲಿ ಕೊಡಗು ಜಿಲ್ಲೆಯಲ್ಲಿ 100% ಗಣತಿ ನಮೂನೆ ವಿತರಣೆ ಪೂರ್ಣಗೊಂಡಿದೆ. ಆದರೆ ಡಿಜಿಟಲೀಕರಣ ಕೇವಲ 49.91%‌ಮಾತ್ರ ಆಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಿಸಿದೆ. ಜಿಲ್ಲಾಧಿಕಾರಿಗಳ ಕಚೇರಿ ಬುಧವಾರ ಸಂಜೆ 4 ಗಂಟೆಗೆ ಬಿಡುಗಡೆ ಮಾಡಿದ ಪ್ರಗತಿ ವರದಿಯ ಪ್ರಕಾರ, ಜಿಲ್ಲೆಯ 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 552 ಮತಗಟ್ಟೆಗಳ ಬಿಎಲ್‌ಓಗಳು ಮನೆ ಮನೆ ಭೇಟಿ ನೀಡಿ 4,68,657 ಮತದಾರರಿಗೆ‌ಗಣತಿ ನಮೂನೆ ವಿತರಿಸಿದ್ದಾರೆ.

 ಡಿಜಿಟಲೀಕರಣ ಅರ್ಧದಷ್ಟು ಬಾಕಿ: ವಿತರಿಸಿದ ನಮೂನೆಗಳಲ್ಲಿ ಇದುವರೆಗೆ 2,33,894 ನಮೂನೆಗಳು ಮಾತ್ರ‌BLO Appನಲ್ಲಿ ಡಿಜಿಟಲೀಕರಣಗೊಂಡಿವೆ. ಇದು ಒಟ್ಟಿನಲ್ಲಿ 49.91% ಆಗಿದೆ. ಅಂದರೆ ಇನ್ನೂ ಅರ್ಧದಷ್ಟು ನಮೂನೆಗಳ ಡಿಜಿಟಲೀಕರಣ ಬಾಕಿ ಇದೆ. SIR ವೇಳೆ ನಡೆಸಿದ ಪರಿಶೀಲನೆಯಲ್ಲಿ 6433 ಮಂದಿ ಮತದಾರರು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡುವ/ಬದಲಾವಣೆ ಪ್ರಕ್ರಿಯೆಯಲ್ಲಿದ್ದಾರೆ. ಅದರಲ್ಲಿ ಸ್ಥಳಾಂತರ - 3185 ಮರಣ - 2632,ಡುಪ್ಲಿಕೇಟ್ - 481 ಗೈರು - 104ಮತ್ತು ಇತರೆ - 31* ಮಂದಿ ಇದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0