ಎಸ್ಐಆರ್: ಕೊಡಗು ಜಿಲ್ಲೆಯಲ್ಲಿ 32 ಸಾವಿರ ಮತದಾರರು ಶಾಶ್ವತವಾಗಿ ಸ್ಥಳಾಂತರ
ಮಡಿಕೇರಿ:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯ ಕೊಡಗು ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿಗಳ ಕಚೇರಿ ಮಂಗಳವಾರ ಸಂಜೆ 4 ಗಂಟೆಗೆ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಜಿಲ್ಲೆಯ 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 552 ಮತಗಟ್ಟೆಗಳ, ಮನೆ ಮನೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಿ, ಭರ್ತಿಯಾದ ಫಾರ್ಮ್‌ಗಳನ್ನು BLO ಆ್ಯಪ್‌ನಲ್ಲಿ ಡಿಜಿಟಲೀಕರಣ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 4,68,657 ಮತದಾರರಿದ್ದಾರೆ. ಎಲ್ಲರಿಗೂ ಗಣತಿ ನಮೂನೆ ವಿತರಣೆ ಶೇ.100 ರಷ್ಟು ಪೂರ್ಣಗೊಂಡಿದೆ. ಇದುವರೆಗೆ 4,00,089 ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಇದು ಶೇ.85.37 ರಷ್ಟಾಗಿದೆ. ನಿನ್ನೆ ಇದ್ದ 84.43% ಗಿಂತ 0.94% ಏರಿಕೆಯಾಗಿದೆ. 61,251 ಮಂದಿ ವಿವಿಧ ಕಾರಣಕ್ಕೆ ಬಾಕಿ Absent/ ಶಾಶ್ವತವಾಗಿ ಸ್ಥಳಾಂತರ/ ಮೃತಪಟ್ಟ/ ಎರಡು ಕಡೆ ಹೆಸರು ಹೊಂದಿರುವ/ ಇತರೆ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸದೇ ಇರುವ ಮತದಾರರ ಸಂಖ್ಯೆ 61,251 ಆಗಿದೆ. ಮೃತಪಟ್ಟವರು 13,464,ಶಾಶ್ವತವಾಗಿ ಸ್ಥಳಾಂತರಗೊಂಡವರು, 32,921,ಎರಡು ಕಡೆ ಹೆಸರು ಹೊಂದಿರುವವರು 5,393, Absent 9,370,ಇತರೆ 103.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
