ಎಸ್ಐಆರ್:ಕೊಡಗು ಜಿಲ್ಲೆಯಲ್ಲಿ 33,994 ಮತದಾರರು ಶಾಶ್ವತ ಸ್ಥಳಾಂತರ
admincoorgdaily

ಮಡಿಕೇರಿ, ಜು.29:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯವು ಕೊಡಗು ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಒಟ್ಟು 552 ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಮನೆ ಮನೆ ಭೇಟಿ ನೀಡಿ ಗಣತಿ ನಮೂನೆಗಳನ್ನು ಮತದಾರರಿಗೆ ವಿತರಿಸಲಾಗಿದೆ. ನಂತರ ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆಯನ್ನು ಸಂಗ್ರಹಿಸಿ, BLO App ನಲ್ಲಿ ಡಿಜಿಟಲೀಕರಣ ಮಾಡಲಾಗುತ್ತಿದೆ.
ಒಟ್ಟು ಮತದಾರರ ಸಂಖ್ಯೆ 4,68,657,ಗಣತಿ ನಮೂನೆ ವಿತರಣೆ 4,68,657,ಗಣತಿ ನಮೂನೆ ಡಿಜಿಟಲೀಕರಣ 4,02,821,ASDDO 63,801, ಮೃತಪಟ್ಟ ಮತದಾರರು13,642, ಶಾಶ್ವತವಾಗಿ ಸ್ಥಳಾಂತರ 33,994, ಎರಡು ಕಡೆ ಹೆಸರು 5,636,Absent ಮತದಾರರು 10,406,ಇತರೆ ಕಾರಣ 123