ಎಸ್ಐಆರ್: ವಿರಾಜಪೇಟೆ ಕ್ಷೇತ್ರದಲ್ಲಿ‌ ASDDO ಅಡಿಯಲ್ಲಿ 33 ಸಾವಿರ ಮತದಾರರು

Jul 28, 2026 - 16:59
Jul 28, 2026 - 17:08
 0  67
ಎಸ್ಐಆರ್: ವಿರಾಜಪೇಟೆ ಕ್ಷೇತ್ರದಲ್ಲಿ‌ ASDDO ಅಡಿಯಲ್ಲಿ 33 ಸಾವಿರ ಮತದಾರರು

ವಿರಾಜಪೇಟೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಗತಿಯಲ್ಲಿದೆ.

209-ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಕಚೇರಿ ಮಂಗಳವಾರ ಸಂಜೆ 4.05 ಕ್ಕೆ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಕ್ಷೇತ್ರ ವ್ಯಾಪ್ತಿಯ 277 ಮತಗಟ್ಟೆಗಳ ಒಟ್ಟು 2,30,210 ಮತದಾರರಿಗೆ ಗಣತಿ ನಮೂನೆ ವಿತರಿಸಲಾಗಿದೆ. ಇದು ಶೇ.100 ರಷ್ಟಾಗಿದೆ. ಇದುವರೆಗೆ 1,93,269 ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ.ಇದು ಶೇ.83.95ರಷ್ಟಾಗಿದೆ.

 ಆನ್‌ಲೈನ್ ಮೂಲಕ ಗಣತಿ ನಮೂನೆ ಸಲ್ಲಿಸಿರುವ ಮತದಾರರ ಸಂಖ್ಯೆ 824 ಆಗಿದೆ. ಗೈರು/ ಸ್ಥಳಾಂತರ/ ಮರಣ/ ಡುಪ್ಲಿಕೇಟ್/ ಇತರೆ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸದೇ ಇರುವ ಮತದಾರರ ಸಂಖ್ಯೆ 33,453 ಆಗಿದೆ. ಗೈರು 5,387, ಸ್ಥಳಾಂತರ 19,155,ಮರಣ 6,119, ಡುಪ್ಲಿಕೇಟ್ 2,732, ಇತರೆ 60

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0