ಎಸ್ಐಆರ್: ವಿರಾಜಪೇಟೆ ಕ್ಷೇತ್ರದಲ್ಲಿ 35 ಸಾವಿರ ಮತದಾರರು ಕರಡು ಪಟ್ಟಿಯಿಂದ ಡಿಲಿಟ್?

Jul 30, 2026 - 16:59
 0  71
ಎಸ್ಐಆರ್: ವಿರಾಜಪೇಟೆ ಕ್ಷೇತ್ರದಲ್ಲಿ 35 ಸಾವಿರ  ಮತದಾರರು ಕರಡು ಪಟ್ಟಿಯಿಂದ ಡಿಲಿಟ್?

ವಿರಾಜಪೇಟೆ:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಾರಿಯಲ್ಲಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯದ ಅಡಿಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 84.78% ಡಿಜಿಟಲೀಕರಣ ಪೂರ್ಣಗೊಂಡಿದೆ.ಜುಲೈ 30 ಸಂಜೆ 4.05ರ ವರೆಗಿನ ಅಂಕಿ ಅಂಶದ ಪ್ರಕಾರ ಕ್ಷೇತ್ರದ 277 ಮತಗಟ್ಟೆಗಳ ವ್ಯಾಪ್ತಿಯಲ್ಲಿ ವಿತರಣೆಯಾದ 2,30,210 ಗಣತಿ ನಮೂನೆಗಳಲ್ಲಿ 1,95,163 ನಮೂನೆಗಳ ಡಿಜಿಟಲೀಕರಣ ಆಗಿದೆ.

35,047 ಮಂದಿ ASDDO ವರ್ಗಕ್ಕೆ: SIR ಪ್ರಕ್ರಿಯೆಯಲ್ಲಿ ಒಟ್ಟು 35,047 ಮತದಾರರನ್ನು ಗೈರು/ಸ್ಥಳಾಂತರ/ಮರಣ/ಡುಪ್ಲಿಕೇಟ್/ಇತರೆ ಎಂದು ASDDO ವರ್ಗದಲ್ಲಿ ಗುರುತಿಸಲಾಗಿದೆ. ಸ್ಥಳಾಂತರ 20,059, ಮರಣ 6,185,ಗೈರು 5,837,ಡುಪ್ಲಿಕೇಟ್ 2,890,ಇತರೆ 76. ಇದರಲ್ಲಿ ಅತಿ ಹೆಚ್ಚು 20,059 ಮಂದಿಯನ್ನು "ಸ್ಥಳಾಂತರ" ಎಂದು ವರ್ಗೀಕರಿಸಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0