Kodagu

ಎಸ್ಐಆರ್: ಕೊಡಗು ಜಿಲ್ಲೆಯಲ್ಲಿ 5,440 ಮಂದಿ ಮತದಾರರು ಶಾಶ್ವತವಾಗಿ ಸ್ಥಳಾಂತರ

admincoorgdaily

ಎಸ್ಐಆರ್: ಕೊಡಗು ಜಿಲ್ಲೆಯಲ್ಲಿ 5,440 ಮಂದಿ ಮತದಾರರು ಶಾಶ್ವತವಾಗಿ ಸ್ಥಳಾಂತರ

ಮಡಿಕೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ SIR ಕಾರ್ಯವನ್ನು ಕೊಡಗು ಜಿಲ್ಲೆಯಲ್ಲಿ ಕೈಗೊಳ್ಳಲಾಗಿದೆ.

ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಒಟ್ಟು 552 ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ, ಗಣತಿ ನಮೂನೆಗಳನ್ನು ಮತದಾರರಿಗೆ ವಿತರಿಸಿ, ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸಿ BLO App ನಲ್ಲಿ Digitization ಮಾಡುತ್ತಿದ್ದಾರೆ. 4,68,657 ಗಣತಿ ನಮೂನೆ ವಿತರಣೆ,ಗಣತಿ ನಮೂನೆ Digitization 2,88,234, ಗೈರು/ಸ್ಥಳಾಂತರ/ಮರಣ/ಡುಪ್ಲಿಕೇಟ್ ಮತದಾರರ ವಿವರ - ಒಟ್ಟು 13,132,ಮೃತಪಟ್ಟ ಮತದಾರರು 5,440, ಶಾಶ್ವತವಾಗಿ ಸ್ಥಳಾಂತರಗೊಂಡವರು 6,341,ಎರಡು ಕಡೆ ಹೆಸರು ಹೊಂದಿರುವವರು 1,048,Absent ಮತದಾರರು 265,ಇತರೆ ಕಾರಣ‌ 38