ಎಸ್ಐಆರ್: ಕೊಡಗು ಜಿಲ್ಲೆಯಲ್ಲಿ ASDDO ಅಡಿಯಲ್ಲಿ 54 ಸಾವಿರ ಮತದಾರರು

Jul 26, 2026 - 18:30
Jul 26, 2026 - 18:32
 0  2
ಎಸ್ಐಆರ್: ಕೊಡಗು ಜಿಲ್ಲೆಯಲ್ಲಿ ASDDO ಅಡಿಯಲ್ಲಿ 54 ಸಾವಿರ ಮತದಾರರು

ಮಡಿಕೇರಿ:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಾರಿಯಾಗಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯವು ಕೊಡಗು ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ.

ಜಿಲ್ಲಾಧಿಕಾರಿಗಳ ಕಚೇರಿ ಭಾನುವಾರ ಸಂಜೆ 4 ಗಂಟೆಗೆ ನೀಡಿದ ಮಾಹಿತಿಯ ಪ್ರಕಾರ, ಜಿಲ್ಲೆಯ 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 552 ಮತಗಟ್ಟೆಗಳ ಬಿಎಲ್‌ಒ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ ಒಟ್ಟು 4,68,657 ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಿದ್ದಾರೆ.

ಇದು ಶೇ.100 ರಷ್ಟಾಗಿದೆ. ಇದುವರೆಗೆ 3,90,753 ಗಣತಿ ನಮೂನೆಗಳನ್ನು BLO ಆ್ಯಪ್‌ನಲ್ಲಿ ಡಿಜಿಟಲೀಕರಣ ಮಾಡಲಾಗಿದೆ. ಇದು ಒಟ್ಟು ಶೇ.83.38 ರಷ್ಟಾಗಿದೆ. ಈ ಪೈಕಿ Absent/ ಶಾಶ್ವತವಾಗಿ ಸ್ಥಳಾಂತರ/ ಮೃತಪಟ್ಟ / ಎರಡು ಕಡೆ ಹೆಸರು ಹೊಂದಿರುವ / ಇತರೆ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸದೇ ಇರುವ ಮತದಾರರ ಸಂಖ್ಯೆ 54,095 ಆಗಿದೆ.ಮೃತಪಟ್ಟ ಮತದಾರರು 13,018, - ಶಾಶ್ವತವಾಗಿ ಸ್ಥಳಾಂತರಗೊಂಡವರು 29,354, ಎರಡು ಕಡೆ ಹೆಸರು ಹೊಂದಿರುವವರು 4,640, Absent ಮತದಾರರು, 7,004 ಇತರೆ ಕಾರಣ 79.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0