ಎಸ್ಐಆರ್: ಕೊಡಗು ಜಿಲ್ಲೆಯಲ್ಲಿ 57 ಸಾವಿರ ಮಂದಿ ಮತದಾರರು ಕರಡು ಪಟ್ಟಿಯಿಂದ ಔಟ್? ಕಾರಣವೇನು ಗೊತ್ತೇ?

Jul 27, 2026 - 17:26
 0  102
ಎಸ್ಐಆರ್: ಕೊಡಗು ಜಿಲ್ಲೆಯಲ್ಲಿ 57 ಸಾವಿರ ಮಂದಿ ಮತದಾರರು ಕರಡು ಪಟ್ಟಿಯಿಂದ ಔಟ್? ಕಾರಣವೇನು ಗೊತ್ತೇ?

ಮಡಿಕೇರಿ:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯ ಕೊಡಗು ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿಗಳ ಕಚೇರಿ ಸೋಮವಾರ ಸಂಜೆ 4 ಗಂಟೆಗೆ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಜಿಲ್ಲೆಯ 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 552 ಮತಗಟ್ಟೆಗಳ ಬಿಎಲ್‌ಒ ಅಧಿಕಾರಿಗಳು ದಿನಾಂಕ 30-06-2026 ರಿಂದ 08-08-2026‌ರವರೆಗೆ ಮನೆ ಮನೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಿ, ಭರ್ತಿಯಾದ ಫಾರ್ಮ್‌ಗಳನ್ನು ಸಂಗ್ರಹಿಸಿ BLO ಆ್ಯಪ್‌ನಲ್ಲಿ ಡಿಜಿಟಲೀಕರಣ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 4,68,657 ಮತದಾರರಿದ್ದಾರೆ. ಎಲ್ಲರಿಗೂ ಗಣತಿ ನಮೂನೆ ವಿತರಣೆ ಶೇ.100 ರಷ್ಟು ಪೂರ್ಣಗೊಂಡಿದೆ. ಇದುವರೆಗೆ 3,95,710 ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಇದು ಶೇ.84.43 ರಷ್ಟಾಗಿದೆ. Absent/ ಶಾಶ್ವತವಾಗಿ ಸ್ಥಳಾಂತರ/ ಮೃತಪಟ್ಟ / ಎರಡು ಕಡೆ ಹೆಸರು ಹೊಂದಿರುವ / ಇತರೆ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸದೇ ಇರುವ ಮತದಾರರ ಸಂಖ್ಯೆ 57,766 ಆಗಿದೆ. ಮೃತಪಟ್ಟವರು,13,237 ಶಾಶ್ವತವಾಗಿ ಸ್ಥಳಾಂತರಗೊಂಡವರು 31,144, ಎರಡು ಕಡೆ ಹೆಸರು ಹೊಂದಿರುವವರು 5,066,Absent 8,230, ಇತರೆ 89.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0