ಎಸ್ಐಆರ್: ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 5905 ಡುಪ್ಲಿಕೇಟ್ ಮತದಾರರು ಪತ್ತೆ

Jul 25, 2026 - 19:33
 0  309
ಎಸ್ಐಆರ್: ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 5905 ಡುಪ್ಲಿಕೇಟ್ ಮತದಾರರು ಪತ್ತೆ

ಮಡಿಕೇರಿ:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯ ಪ್ರಗತಿಯಲ್ಲಿದೆ. ಕೊಡಗು ಜಿಲ್ಲೆಯ 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಒಟ್ಟು 277 ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು ಜೂನ್ 30 ರಿಂದ ಮನೆ-ಮನೆ ಭೇಟಿ ನೀಡಿ ಗಣತಿ ನಮೂನೆ ವಿತರಿಸುತ್ತಿದ್ದಾರೆ.

ಮತದಾರರ ನೋಂದಣಾಧಿಕಾರಿ, 209-ವಿರಾಜಪೇಟೆ ಕ್ಷೇತ್ರವು ಇಂದು ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಗಣತಿ ನಮೂನೆ ವಿತರಣೆ 2,30,210,ಗಣತಿ ನಮೂನೆ ಡಿಜಿಟಲೀಕರಣ 1,80,098, ಆನ್‌ಲೈನ್ ಮೂಲಕ ಸಲ್ಲಿಸಿರುವ ನಮೂನೆ 813, ಒಟ್ಟು 28,734 ಮತದಾರರ ಹೆಸರುಗಳನ್ನು ಗೈರು, ಸ್ಥಳಾಂತರ, ಮರಣ, ಡುಪ್ಲಿಕೇಟ್ ಕಾರಣಗಳಿಂದ ತೆಗೆದುಹಾಕಲಾಗಿದೆ.ಗೈರು 3,905, ಸ್ಥಳಾಂತರ 16,601,ಮರಣ 5,905,ಡುಪ್ಲಿಕೇಟ್ 2,280, ಇತರೆ 43 ಈ ಕುರಿತು ಮತದಾರರ ನೋಂದಣಾಧಿಕಾರಿ, 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಹಾಗೂ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಡಗು ಮಾಹಿತಿ ನೀಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0