ಎಸ್ಐಆರ್:ಕೊಡಗು ಜಿಲ್ಲೆಯಲ್ಲಿ 64,461 ಮತದಾರರು ಕರಡು ಪಟ್ಟಿಯಿಂದ ಡಿಲಿಟ್
admincoorgdaily

ಮಡಿಕೇರಿ:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಕೊಡಗು ಜಿಲ್ಲೆಯಲ್ಲಿ ಚುರುಕುಗೊಳಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ 02-08-2026 ರಂದು ಸಂಜೆ 4 ಗಂಟೆಗೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಕೊಡಗು ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 4,68,657, ಗಣತಿ ನಮೂನೆ ವಿತರಣೆ 4,68,657,ಜಿಲ್ಲೆಯಲ್ಲಿ ಒಟ್ಟು 4,04,196 ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು,
ಇದು ಶೇ.86.25 ರಷ್ಟಾಗಿದೆ. ಗಣತಿ ನಮೂನೆಯನ್ನು ವಿವಿಧ ಕಾರಣಗಳಿಂದ ಸಲ್ಲಿಸದ ಮತದಾರರ ಸಂಖ್ಯೆ 64,461 ಆಗಿದೆ. ಇದರಲ್ಲಿ ಮೃತಪಟ್ಟ ಮತದಾರರು 13,678,ಶಾಶ್ವತವಾಗಿ ಸ್ಥಳಾಂತರಗೊಂಡವರು, 34,121 ಎರಡು ಕಡೆ ಹೆಸರು ಹೊಂದಿರುವವರು 5,789, Absent ಮತದಾರರು 10,749, ಇತರೆ ಕಾರಣಗಳು 124.