ಎಸ್ ಐಆರ್: ಕೊಡಗು ಜಿಲ್ಲೆಯಲ್ಲಿ 64,672 ಮತದಾರರು ಕರುಡು ಪಟ್ಟಿಯಿಂದ ಔಟ್

Jul 31, 2026 - 18:48
 0  36
ಎಸ್ ಐಆರ್: ಕೊಡಗು ಜಿಲ್ಲೆಯಲ್ಲಿ 64,672 ಮತದಾರರು ಕರುಡು ಪಟ್ಟಿಯಿಂದ ಔಟ್

ಮಡಿಕೇರಿ:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ - SIR ಕಾರ್ಯ ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿದೆ. ಜಿಲ್ಲಾಧಿಕಾರಿಗಳ ಕಾರ್ಯಾಲಯವು ದಿನಾಂಕ 31-07-2026 ರಂದು ಸಂಜೆ 4 ಗಂಟೆಯ ವರದಿ ಪ್ರಕಟಿಸಿದ್ದು, ಮನೆ ಮನೆ ಭೇಟಿ ಮತ್ತು ಡಿಜಿಟಲೀಕರಣ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದೆ. ಜಿಲ್ಲೆಯ 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಒಟ್ಟು 552 ಮತಗಟ್ಟೆಗಳ ವ್ಯಾಪ್ತಿಯಲ್ಲಿ SIR ಕಾರ್ಯ ನಡೆಯುತ್ತಿದೆ.

ಒಟ್ಟು ಮತದಾರರ ಸಂಖ್ಯೆ 4,68,657 ,ಗಣತಿ ನಮೂನೆ ವಿತರಣೆ 4,68,657,ಗಣತಿ ನಮೂನೆ ಡಿಜಿಟಲೀಕರಣ 4,03,985, ಒಟ್ಟು 64,672 ಮತದಾರರು Absent/ ಸ್ಥಳಾಂತರ/ ಮೃತಪಟ್ಟು/ ಎರಡು ಕಡೆ ಹೆಸರು ಹೊಂದಿರುವ/ ಇತರೆ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸಿಲ್ಲ.ಮೃತಪಟ್ಟ ಮತದಾರರ ಸಂಖ್ಯೆ 13,686,ಶಾಶ್ವತವಾಗಿ ಸ್ಥಳಾಂತರಗೊಂಡವರು 34,148, ಎರಡು ಕಡೆ ಹೆಸರು ಹೊಂದಿರುವವರು 5,760, Absent ಮತದಾರರು 10,952, ಇತರೆ ಕಾರಣ 126

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0