ಎಸ್ಐಆರ್: ಕೊಡಗು ಜಿಲ್ಲೆಯಲ್ಲಿ 64,957 ಮತದಾರರು ಕರಡು ಪಟ್ಟಿಯಿಂದ ಡಿಲೀಟ್

Jul 30, 2026 - 17:58
 0  75
ಎಸ್ಐಆರ್: ಕೊಡಗು ಜಿಲ್ಲೆಯಲ್ಲಿ 64,957 ಮತದಾರರು ಕರಡು ಪಟ್ಟಿಯಿಂದ ಡಿಲೀಟ್

ಮಡಿಕೇರಿ:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಾರಿಯಲ್ಲಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯದಡಿ ಕೊಡಗು ಜಿಲ್ಲೆಯಲ್ಲಿ ಶೇ. 86.14 ರಷ್ಟು ಗಣತಿ ನಮೂನೆಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಜಿಲ್ಲಾಧಿಕಾರಿಗಳ ಕಾರ್ಯಾಲಯವು ಜುಲೈ 30 ಸಂಜೆ 4 ಗಂಟೆಗೆ ಬಿಡುಗಡೆ ಮಾಡಿದ ಅಂಕಿ-ಅಂಶದ ಪ್ರಕಾರ, ಜಿಲ್ಲೆಯ 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 552 ಮತಗಟ್ಟೆಗಳಲ್ಲಿ 4,68,657 ಮತದಾರರಿಗೆ 100% ಗಣತಿ ನಮೂನೆ ವಿತರಣೆ ಮಾಡಲಾಗಿದೆ.

ಒಟ್ಟು ವಿತರಿಸಿದ 4,68,657 ನಮೂನೆಗಳಲ್ಲಿ 4,03,700 ನಮೂನೆಗಳ ಡಿಜಿಟಲೀಕರಣ ಆಗಿದೆ. 64,957 ಮಂದಿ ASDDO ವರ್ಗಕ್ಕೆ:Absent/ಶಾಶ್ವತ ಸ್ಥಳಾಂತರ/ಮೃತಪಟ್ಟ/ಎರಡು ಕಡೆ ಹೆಸರು/ಇತರೆ* ಕಾರಣಗಳಿಂದ ASDDO ಎಂದು ವರ್ಗೀಕರಿಸಲಾಗಿದೆ. ಶಾಶ್ವತವಾಗಿ ಸ್ಥಳಾಂತರ, 34,377 ಮೃತಪಟ್ಟವರು 13,676, Absent 11,047,ಎರಡು ಕಡೆ ಹೆಸರು 5,733 ಇತರೆ ಕಾರಣ 124.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0