ಎಸ್ಐಆರ್: ಕರ್ನಾಟಕದಲ್ಲಿ 8 ಲಕ್ಷದ 92 ಸಾವಿರ ಮಂದಿ ಪತ್ತೆಯಾಗದ ಮತದಾರರು
ಬೆಂಗಳೂರು:ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ - SIR ಪ್ರಕ್ರಿಯೆ ರಾಜ್ಯದಲ್ಲಿ ಚುರುಕುಗೊಂಡಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಭಾನುವಾರ ಸಂಜೆ 6 ಗಂಟೆಗೆ ಬಿಡುಗಡೆ ಮಾಡಿದ ದೈನಂದಿನ ಪ್ರಕಟಣೆಯ ಪ್ರಕಾರ, ದಿನಾಂಕ 16-06-2026 ರಂತೆ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರು ಇದ್ದಾರೆ.
ಎಲ್ಲಾ ಮತದಾರರಿಗೂ ಗಣತಿ ನಮೂನೆ - EF ಗಳ ಮುದ್ರಣ ಮತ್ತು ವಿತರಣೆ ಶೇ.100 ರಷ್ಟು ಪೂರ್ಣಗೊಂಡಿದೆ. ಡಿಜಿಟಲೀಕರಣಗೊಂಡ EF 4,10,29,987,ಮತದಾರರಿಂದ ಆನ್‌ಲೈನ್‌ನಲ್ಲಿ ಸಲ್ಲಿಕೆಯಾದ EF 6,41,393,ASDDO ಎಂದು ಗುರುತಿಸಲಾದವರು 68,28,558, ಪತ್ತೆಯಾಗದ / Absent ಮತದಾರರು 8,92,347,ಶಾಶ್ವತವಾಗಿ ಸ್ಥಳಾಂತರಗೊಂಡವರು 41,04,697, ಮೃತಪಟ್ಟ ಮತದಾರರು 13,50,753, ಈಗಾಗಲೇ ನೋಂದಾಯಿತ ಮತದಾರರು 4,59,508, ಇತರೆ 21,253.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
