SIR KARNATAKA

SIR:ಕೊಡಗಿನಲ್ಲಿ ಶೇಕಡಾ 86 ರಷ್ಟು ಮತದಾರರ ಮಾಹಿತಿ ಡಿಜಿಟೈಸ್

admincoorgdaily

SIR:ಕೊಡಗಿನಲ್ಲಿ ಶೇಕಡಾ 86 ರಷ್ಟು ಮತದಾರರ ಮಾಹಿತಿ ಡಿಜಿಟೈಸ್

ಮಡಿಕೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ 86.27% ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ.

ಒಟ್ಟು ಮತದಾರರ ಸಂಖ್ಯೆ 4,68,657, ಗಣತಿ ನಮೂನೆ ವಿತರಣೆ 4,68,657 ಡಿಜಿಟಲೀಕರಣಗೊಂಡ ನಮೂನೆ 4,04,303, ಗಣತಿ ನಮೂನೆ ಸಲ್ಲಿಸದವರ ಸಂಖ್ಯೆ 64,354, ವಿವಿಧ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸದ ಮತದಾರರ ಸಂಖ್ಯೆ 64,354 ಆಗಿದೆ. ಇದರಲ್ಲಿ, ಮೃತಪಟ್ಟ ಮತದಾರರು 13,676, ಶಾಶ್ವತವಾಗಿ ಸ್ಥಳಾಂತರಗೊಂಡವರು 34,051, ಎರಡು ಕಡೆ ಹೆಸರು ಹೊಂದಿರುವವರು 5,803, Absent ಮತದಾರರು 10,699, ಇತರೆ ಕಾರಣ 125