ಎಸ್‌ಐಆರ್:ಜುಲೈ 25 ಮತ್ತು 26ರಂದು ಬಿಜೆಪಿಯಿಂದ ಮನೆ-ಮನೆ ಅಭಿಯಾನ
admincoorgdaily

ಮಡಿಕೇರಿ: ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಮತದಾರರಲ್ಲಿ ಮೂಡಿರುವ ಗೊಂದಲ ನಿವಾರಿಸಲು ಮತ್ತು ಪರಿಷ್ಕರಣೆಯ ಯಶಸ್ವಿಗೆ ಸಹಕರಿಸುವ ಸಲುವಾಗಿ ಭಾರತೀಯ ಜನತಾ ಪಾರ್ಟಿ ಜು.೨೫ ಮತ್ತು ಜು.೨೬ ರಂದು ಜಿಲ್ಲಾದ್ಯಂತ ಮನೆ-ಮನೆ ಅಭಿಯಾನ ಹಮ್ಮಿಕೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದರು.
ಕೊಡಗಿನಲ್ಲಿ ಎಸ್‌ಐಆರ್ ವ್ಯವಸ್ಥಿತವಾಗಿ ನಡೆಯುತ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಸಹಕಾರ ನೀಡುವ ಹಿನ್ನೆಲೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಂದು ಪ್ರತಿ ೨೦ ಮನೆಗಳಿಗೆ ಒಬ್ಬ ಕಾರ್ಯಕರ್ತ ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್‌ನ ಪ್ರತಿಭಟನೆಯನ್ನು ಟೀಕಿಸಿದ ರವಿ ಕಾಳಪ್ಪ, ನೀಟ್ ವಿಚಾರದಲ್ಲಿ ಮೋದಿ ಸರ್ಕಾರ ಮರು ಪರೀಕ್ಷೆ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಕೊಟ್ಟಿದೆ. ಆದರೆ ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದ ಅವರು, ಸತ್ಯಾಂಶ ತಿಳಿಸಲು ಜು.೨೪ ರಂದು ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಜಿಲ್ಲಾಧ್ಯಕ್ಷ ರಾಬಿನ್, ಪ್ರದಾನ ಕಾರ್ಯದರ್ಶಿಗಳಾದ ಮಹೇಶ್ ಜೈನ್, ವಿ.ಕೆ.ಲೋಕೇಶ್, ವಕ್ತಾರ ಅರುಣ್ ಕುಮಾರ್, ಸಜಿಲ್ ಕೃಷ್ಣನ್ ಇದ್ದರು.