SIR: ಕೊಡಗಿನಲ್ಲಿ ಡಿಜಿಟಲೀಕರಣ ಮಂದಗತಿ, ರಾಜ್ಯದಲ್ಲೇ ಕೊನೆ ಸ್ಥಾನ
admincoorgdaily

ಮಡಿಕೇರಿ, ಜೂನ್ 29: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ -SIR ಪ್ರಕ್ರಿಯೆಯ ಮೊದಲ ದಿನ ಕೊಡಗು ಜಿಲ್ಲೆಯಲ್ಲಿ ಗಣತಿ ನಮೂನೆ -ಎನ್ಯೂಮರೇಷನ್ ಫಾರಂ ಡಿಜಿಟಲೀಕರಣದಲ್ಲಿ ರಾಜ್ಯದಲ್ಲೇ ಅತೀ ಕಡಿಮೆ ಸಾಧನೆ ದಾಖಲಾಗಿದೆ.
ಮಂಗಳವಾರ ಜೂನ್ 30 ರಾಜ್ಯಾದ್ಯಂತ 12,48,314 ನಮೂನೆ ವಿತರಣೆಯಾಗಿದ್ದು, 47,817 ನಮೂನೆ ಡಿಜಿಟಲೀಕರಣಗೊಂಡಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಕೇವಲ 82 ನಮೂನೆ ಮಾತ್ರ ಡಿಜಿಟಲೀಕರಣಗೊಂಡಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.