State News

ಎಸ್ಐಆರ್: ಕರ್ನಾಟಕದಲ್ಲಿ 3ಕೋಟಿ‌ 95 ಲಕ್ಷ ಮತದಾರರ ಮಾಹಿತಿ ಡಿಜಿಟಲೀಕರಣ

admincoorgdaily

ಎಸ್ಐಆರ್: ಕರ್ನಾಟಕದಲ್ಲಿ 3ಕೋಟಿ‌ 95 ಲಕ್ಷ ಮತದಾರರ ಮಾಹಿತಿ ಡಿಜಿಟಲೀಕರಣ

ಬೆಂಗಳೂರು: ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿ ಶುಕ್ರವಾರ ಸಂಜೆ 6.00ಕ್ಕೆ ಬಿಡುಗಡೆ ಮಾಡಿದ SIR ದೈನಂದಿನ ಪ್ರಕಟಣೆಯ ಪ್ರಕಾರ, ರಾಜ್ಯದಲ್ಲಿ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಚುರುಕಾಗಿ ಸಾಗುತ್ತಿದೆ.

 ಜೂನ್ 16, 2026 ರಂತೆ ರಾಜ್ಯದ ಮತದಾರರ ಪಟ್ಟಿಯಲ್ಲಿ ಒಟ್ಟು 5,54,32,314‌ಮತದಾರರಿದ್ದು, ಎಲ್ಲರಿಗೂ ಗಣತಿ ನಮೂನೆಗಳನ್ನು ಮುದ್ರಿಸಿ BLO ಗಳಿಗೆ ವಿತರಿಸಲಾಗಿದೆ.

 ಒಟ್ಟು ನಮೂನೆ ಮುದ್ರಣ 5,54,32,314,ಒಟ್ಟು ಡಿಜಿಟಲೀಕರಣ 3,95,79,617, ಆನ್‌ಲೈನ್ ಮೂಲಕ ಸಲ್ಲಿಕೆ,6,18,924 ASDDO 58,54,874, -ಪತ್ತೆಯಾಗದ/ಗೈರು 7,62,867, ಶಾಶ್ವತ ಸ್ಥಳಾಂತರ 34,76,017, ಮರಣ 12,17,592, ಈಗಾಗಲೇ ದಾಖಲಾಗಿರುವವರು 3,82,083, ಇತರೆ 16,315.