SIR:ಮಡಿಕೇರಿ ಕ್ಷೇತ್ರದಲ್ಲಿ 1ಲಕ್ಷ 24 ಸಾವಿರ ಮತದಾರರ ಎನ್ಯುಮರೇಶನ್ ಫಾರ್ಮ್ ಡಿಜಿಟಲೀಕರಣ
admincoorgdaily

ಮಡಿಕೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 208-ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯ ಪ್ರಗತಿಯಲ್ಲಿದೆ. ಮಡಿಕೇರಿ ಉಪ ವಿಭಾಗಾಧಿಕಾರಿಗಳ ಕಚೇರಿ 15-07-2026 ಸಂಜೆ 6 ಗಂಟೆಗೆ ಬಿಡುಗಡೆ ಮಾಡಿದ ವರದಿ ಪ್ರಕಾರ ಕ್ಷೇತ್ರದ 275 ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ ಗಣತಿ ನಮೂನೆ ವಿತರಿಸಿದ್ದಾರೆ. ಗಣತಿ ನಮೂನೆ ವಿತರಣೆ 2,38,447,ಗಣತಿ ನಮೂನೆ ಡಿಜಿಟಲೀಕರಣ 1,24,031,ಆನ್‌ಲೈನ್ ಮೂಲಕ ಸಲ್ಲಿಸಿದವರು 586, ಗೈರು 46,ಸ್ಥಳಾಂತರ 702, ಮರಣ,1,165,ಡುಪ್ಲಿಕೇಟ್ 163, ಇತರೆ 14.