ಎಸ್ಐಆರ್: ಕರ್ನಾಟಕದಲ್ಲಿ 4 ಕೋಟಿ 45 ಲಕ್ಷ ಮತದಾರರ ಎನ್ಯುಮರೇಶನ್ ಫಾರ್ಮ್ ಡಿಜಿಟಲೀಕರಣ
ಬೆಂಗಳೂರು:ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿ ಬಿಡುಗಡೆ ಮಾಡಿರುವ ದೈನಂದಿನ ಪ್ರಕಟಣೆಯ ಪ್ರಕಾರ, ರಾಜ್ಯದಲ್ಲಿ ಒಟ್ಟು 5,54,32,314 ಮತದಾರರು ಇದ್ದಾರೆ. 16.06.2026ರಂತೆ ಇರುವ ಮತದಾರರ ಪಟ್ಟಿಯ ಆಧಾರದ ಮೇಲೆ ಮನೆ ಮನೆ ಸಮೀಕ್ಷೆಗಾಗಿ ಮುದ್ರಣ ಮತ್ತು ವಿತರಣೆ ಮಾಡಲಾದ ಎಣಿಕೆ ನಮೂನೆಗಳು 100% ಪೂರ್ಣಗೊಂಡಿವೆ.
ಒಟ್ಟು ಮುದ್ರಿಸಲಾದ EF: 5,54,32,314,ಒಟ್ಟು ವಿತರಿಸಲಾದ EF 5,54,32,314. ಡಿಜಿಟಲೀಕರಣಗೊಂಡ ಪೈಕಿ 4,45,02,993 - 80.28%* ಮತದಾರರ ಮಾಹಿತಿ ನಮೂದಾಗಿದೆ. 1,09,29,262 ಮತದಾರರನ್ನು ASDDO ಅಂದರೆ ಪತ್ತೆಯಾಗದ/ಗೈರು/ಸ್ಥಳಾಂತರಗೊಂಡ ಮತದಾರರಾಗಿ ಗುರುತಿಸಲಾಗಿದೆ. ಪತ್ತೆಯಾಗದ/ಗೈರು ಮತದಾರರು: 15,71,849,ಶಾಶ್ವತವಾಗಿ ಸ್ಥಳಾಂತರಗೊಂಡವರು 65,91,525,ಮೃತ ಮತದಾರರು 16,35,379,ಈಗಾಗಲೇ ನೋಂದಣಿಯಾಗಿರುವವರು 6,98,479,ಇತರೆ: 4,32,030 ಆನ್‌ಲೈನ್ ಸಲ್ಲಿಕೆ 7,03,019 ಮತದಾರರು - 1.27% ರಷ್ಟು ಜನರು ತಮ್ಮ ನಮೂನೆಯನ್ನು ಆನ್‌ಲೈನ್ ಮೂಲಕ ಸಲ್ಲಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
