ಎಸ್ಐಆರ್:ಕೊಡಗು ಜಿಲ್ಲೆಯಲ್ಲಿ 4 ಲಕ್ಷದ 5ಸಾವಿರ ಮತದಾರರ ಎನ್ಯುಮರೇಶನ್ ಫಾರ್ಮ್ ಡಿಜಿಟಲೀಕರಣ
admincoorgdaily

ಮಡಿಕೇರಿ:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ SIR ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ. ಒಟ್ಟು ಮತದಾರರ ಸಂಖ್ಯೆ 4,68,657, ಗಣತಿ ನಮೂನೆ ಡಿಜಿಟಲೀಕರಣ 4,05,651 ಡಿಸಿ ಕಚೇರಿ ನೀಡಿದ ಮಾಹಿತಿಯ ಪ್ರಕಾರ ಈ ಕೆಳಗಿನ ಕಾರಣಗಳಿಂದ ASDDO 63,006 ಮತದಾರರ ನಮೂನೆಗಳು ಸಲ್ಲಿಕೆಯಾಗಿಲ್ಲ. -ಮೃತಪಟ್ಟ ಮತದಾರರು 13,727,ಶಾಶ್ವತವಾಗಿ ಸ್ಥಳಾಂತರಗೊಂಡವರು 33,496, ಎರಡು ಕಡೆ ಹೆಸರು ಹೊಂದಿರುವವರು 6,015, Absent ಮತದಾರರು 9,651, ಇತರೆ ಕಾರಣಗಳು 117.