ಎಸ್ಐಆರ್;ಮೊದಲ ಹಂತ ಮುಕ್ತಾಯ
ಕೆ.ಎಂ ಇಸ್ಮಾಯಿಲ್ ಕಂಡಕರೆ
ಮಡಿಕೇರಿ: ಚುನಾವಣಾ ಆಯೋಗ ರಾಜ್ಯಾದ್ಯಂತ ಜೂನ್ 30ರಿಂದ ಆಗಸ್ಟ್ 17ರವರೆಗೆ ನಡೆಸಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಮೊದಲ ಹಂತ ಆಗಸ್ಟ್ 17ಕ್ಕೆ ಮುಕ್ತಾಯಗೊಂಡಿದ್ದು,ಆಗಸ್ಟ್ 24ರಂದು ಮತದಾರರ ಕರಡು ಪಟ್ಟಿ ಪ್ರಕಟಗೊಳ್ಳಲಿದೆ.ಜಿಲ್ಲೆಯಲ್ಲಿ ಜೂನ್ 16ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರಿದ್ದ 4,68,657 ಮತದಾರರ ಎನ್ಯುಮರೇಶನ್ ಫಾರ್ಮ್ ಪ್ರಿಂಟ್ ಆಗಿತ್ತು.ಆಗಸ್ಟ್ 17ರವರೆಗೆ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ಸೇರಿ 4,05,833 ಮತದಾರರ ಎನ್ಯುಮರೇಶನ್ ಫಾರ್ಮ್ ಅಪ್ಲೋಡ್ ಆಗಿದ್ದು, ಶೇಕಡಾ 86.59ರಷ್ಟು ಎಸ್ಐಆರ್ ಪ್ರಗತಿ ಕಂಡಿದೆ.ಎನ್ಯುಮರೇಶನ್ ಫಾರ್ಮ್ ಅಪ್ಲೋಡ್ ಆಗಿರುವ ಮತದಾರರ ಹೆಸರು ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟಗೊಳ್ಳಲಿದೆ.
ಜಿಲ್ಲೆಯಲ್ಲಿ ASDDO ಪಟ್ಟಿಯಲ್ಲಿ 62,824 ಮತದಾರರನ್ನು ಸೇರಿಸಲಾಗಿದೆ.ಇದರಲ್ಲಿ ಗೈರು ಮತದಾರರು 9,583 , ಶಾಶ್ವತ ಸ್ಥಳಾಂತರ 33,555, ಮರಣ 13,731, ಎರಡು ಕಡೆ ಹೆಸರು ನೋಂದಾಯಿಸಿರುವ ಮತದಾರರು 6039 ಹಾಗೂ ಇತರೆ 116 ಮತದಾರರನ್ನು ಸೇರಿ ಶೇಕಡಾ 13.45 ರಷ್ಟು ಮತದಾರರನ್ನು ಕೊಡಗು ಜಿಲ್ಲೆಯಲ್ಲಿ ASDDO ಪಟ್ಟಿಯಲ್ಲಿ ಸೇರಿಸಲಾಗಿದೆ.
ತಪ್ಪಾಗಿ ASDDO ಪಟ್ಟಿಯಲ್ಲಿ ಸೇರಿಸಲಾಗಿದ್ದ ಅರ್ಹ ಮತದಾರರಿಗೆ ಚುನಾವಣಾ ಆಯೋಗ ರೋಲ್ ಬ್ಯಾಕ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು.ಆದರೆ ಬಹುತೇಕ ಗ್ರಾಮೀಣ ಭಾಗದಲ್ಲಿರುವ ಮತದಾರರಿಗೆ ರೋಲ್ ಬ್ಯಾಕ್ ಬಗ್ಗೆ ಮಾಹಿತಿಯೇ ಇಲ್ಲ.ಅದಲ್ಲದೇ ತಮ್ಮ ತಪ್ಪಾಗಿ ASDDO ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆಯೇ ಎಂದು ಹೇಗೆ ಪರಿಶೀಲಿಸುವುದು ಎಂಬುದರ ಬಗ್ಗೆ ಕೂಡ ಸರಿಯಾದ ಮಾಹಿತಿ ದೊರೆತಿಲ್ಲ.ಚುನಾವಣಾ ಆಯೋಗ ರೋಲ್ ಬ್ಯಾಕ್ ಮಾಡಿಕೊಳ್ಳಲು ಅವಕಾಶ ನೀಡಿದ ಬಳಿಕ ಜಿಲ್ಲೆಯಲ್ಲಿ ಜುಲೈ 30 ರಿಂದ ಆಗಸ್ಟ್ 17ರವರೆಗೆ 2,133 ಮತದಾರರು ರೋಲ್ ಬ್ಯಾಕ್ ಮಾಡಿಕೊಂಡಿದ್ದಾರೆ.ವಿಪರ್ಯಾಸವೆಂದರೆ ಜೀವಂತ ಮತದಾರರನ್ನು ಕೂಡ ಮರಣ ಎಂದು ASDDO ಪಟ್ಟಿಗೆ ಸೇರ್ಪಡೆ ಮಾಡಲಾಗಿತ್ತು.
33,555 ಮತದಾರರು ಸ್ಥಳಾಂತರ;
ಕೊಡಗು ಜಿಲ್ಲೆಯಲ್ಲಿ 62,824 ಮತದಾರರು ಹೆಸರು ಕರಡು ಪಟ್ಟಿಯಿಂದ ಡಿಲೀಟ್ ಆಗಲಿದ್ದು,ಇದರಲ್ಲಿ 33,555 ಮತದಾರರು ಶಾಶ್ವತ ಸ್ಥಳಾಂತರ ಎಂದು ಗುರುತಿಸಲಾಗಿದೆ.ಈ ಮಾಹಿತಿಯ ಬಗ್ಗೆ ಈಗಾಗಲೇ ಹಲವು ಅನುಮಾನಗಳು ವ್ಯಕ್ತವಾಗಿದೆ.ಲೋಕಸಭಾ ಚುನಾವಣೆ ಮುಗಿದು ಎರಡು ವರ್ಷಗಳಲ್ಲಿ 33 ಮತದಾರರು ಸ್ಥಳಾಂತರಗೊಂಡಿದ್ದಾರಾ! ಎಂಬ ಪ್ರಶ್ನೆ ಉದ್ಭವಿಸಿದೆ.ASDDO ಪಟ್ಟಿಯಿಂದ ಇದುವರೆಗೆ 2,133 ಮತದಾರರು ರೋಲ್ ಬ್ಯಾಕ್ ಮಾಡಿಕೊಂಡಿದ್ದಾರೆ.
ಆಗಸ್ಟ್ 17ರಂದು ಕೂಡ 184 ಮತದಾರರು ರೋಲ್ ಬ್ಯಾಕ್ ಮಾಡಿಕೊಂಡು ಎನ್ಯುಮರೇಶನ್ ಫಾರ್ಮ್ ಭರ್ತಿಮಾಡಿ ನೀಡಿದ್ದಾರೆ. ಮತಗಟ್ಟೆ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸದೆ ಅರ್ಹ ಮತದಾರರನ್ನು ಕೂಡ ASDDO ಪಟ್ಟಿಗೆ ಜಿಲ್ಲೆಯಲ್ಲಿ ಸೇರ್ಪಡೆಗೊಳಿಸಿದ್ದಾರೆ.ಶಾಶ್ವತ ಸ್ಥಳಾಂತರ ಎಂದು ಗುರುತಿಸಿರುವ ಮತದಾರರಲ್ಲಿ ಶೇಕಡಾ 30 ರಷ್ಟು ಮಾತ್ರ ಸರಿಯಾದ ಮಾಹಿತಿ ಇರುವುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಶೇಕಡಾ 70% ರಷ್ಟು ನೈಜ ಮತದಾರರನ್ನು ಸ್ಥಳಾಂತರವೆಂದು ಗುರುತಿಸಿಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.ಆಗಸ್ಟ್ 24 ರಂದು ಪ್ರಕಟಗೊಳ್ಳಲಿರುವ ಕರಡು ಮತದಾರರ ಪಟ್ಟಿಯಿಂದ ಹೆಸರು ಹೊರಗುಳಿದ್ದಲ್ಲಿ ಮತದಾರರು, ದಾಖಲೆಗಳನ್ನು ಸಲ್ಲಿಸಿ ಹೊಸದಾಗಿ ಸೇರ್ಪಡೆ ಮಾಡಬೇಕಾದ ಅನಿವಾರ್ಯತೆ ಇದೆ.
ಲಾಜಿಕಲ್ ಡಿಸ್ಕ್ರಿಪೆನ್ಸಿ ಗೊಂದಲಕ್ಕೀಡಾದ ಮತದಾರರು!
ಲಾಜಿಕಲ್ ಡಿಸ್ಕ್ರಿಪೆನ್ಸಿ ಎಂದು ಮತದಾರರನ್ನು ಪ್ರತ್ಯೇಕಿಸಲಾಗಿದೆ.ಆದರೆ ಲಾಜಿಕಲ್ ಡಿಸ್ಕ್ರಿಪೆನ್ಸಿ ಬಗ್ಗೆ ಬಿಎಲ್ಒ ಆ್ಯಪ್ ನಲ್ಲಿ ಮಾಹಿತಿ ಇದೆಯೇ ಎಂಬ ಬಗ್ಗೆ ಶೇಕಡಾ 60% ರಷ್ಟು ಬಿಎಲ್ಒ ಗಳಿಗೆ ಗೊತ್ತೇ ಇಲ್ಲ.ಕೆಲವು ಭಾಗಗಳಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಇರುವ ಮತದಾರರಿಗೆ ಮಾಹಿತಿ ನೀಡಿ ಬಿಎಲ್ಒ ಗಳು ತಾವೇ ಖುದ್ದಾಗಿ ಸರಿಪಡಿಸಿದ್ದಾರೆ.ಆದರೆ ಬಹುತೇಕ ಕಡೆಗಳಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಬಗ್ಗೆ ಬಿಎಲ್ಒ ಗಳಿಗೇ ಅರಿವೇ ಇಲ್ಲದಂತಾಗಿದೆ.
ಲಾಜಿಕಲ್ ಡಿಸ್ಕ್ರಿಪೆನ್ಸಿ ಯಾವ ರೀತಿಯಲ್ಲಿ ಸರಿಪಡಿಸಬಹುದೆಂಬ ಗೊಂದಲಕ್ಕೆ ಮತದಾರರು ಸಿಲುಕಿಕೊಂಡಿದ್ದಾರೆ.ಇದರ ಬಗ್ಗೆ ಮಾಹಿತಿ ನೀಡಬೇಕಾದ ರಾಷ್ಟ್ರೀಯ ಪಕ್ಷಗಳ ಏಜೆಂಟ್ ರುಗಳಿಗೆ ಲಾಜಿಕ್ ಡಿಸ್ಕ್ರಿಪೆನ್ಸಿ ಬಗ್ಗೆ ಕಿಂಚಿತ್ತೂ ಅರಿವೇ ಇಲ್ಲ.
ಆಗಸ್ಟ್ 24ರ ಬಳಿಕ ಲಾಜಿಕಲ್ ಡಿಸ್ಕ್ರಿಪೆನ್ಸಿ ಅಡಿಯಲ್ಲಿ ಪ್ರತ್ಯೇಕಿಸಲಾಗಿರುವ ಮತದಾರರಿಗೆ ಕೂಡ ನೋಟಿಸ್ ನೀಡಲಾಗುತ್ತದೆ.ಈ ಸಂದರ್ಭದಲ್ಲಿ ಮತದಾರರು ದಾಖಲೆಗಳನ್ನು ನೀಡಿದ್ದಲ್ಲಿ ಮಾತ್ರ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಪ್ರಕಟಗೊಳ್ಳಲು ಸಾಧ್ಯ,ಇಲ್ಲದಿದ್ದರೆ ಅರ್ಹ ಮತದಾರರು ಕೂಡ ಮತದಾರರ ಪಟ್ಟಿಯಿಂದ ಹೊರಗುಳಿಯಲಿದ್ದಾರೆ.
23,884 ಮತದಾರರು ನೋ ಮ್ಯಾಪಿಂಗ್
ಎನ್ಯುಮರೇಶನ್ ಫಾರ್ಮ್ ಬಿ.ಎಲ್.ಒ ಗಳಿಗೆ ಹಿಂತಿರುಗಿಸಿ ಅಪ್ಲೋಡ್ ಆಗಿರುವ 4,05,646 ಮತದಾರರ ಪೈಕಿ 23,884 ಮತದಾರರ ಅನ್ ಮ್ಯಾಪಿಂಗ್ ಪಟ್ಟಿಯಲ್ಲಿ ಇದ್ದಾರೆ.ಅಂದರೆ,ಈ ಮತದಾರರಿಗೆ ತಮ್ಮ ವೈಯುಕ್ತಿಕ ಅಥವಾ,ತಂದೆ,ತಾಯಿ, ಅಜ್ಜ, ಅಜ್ಜಿ 2002ರ ಮತದಾರರ ಪಟ್ಟಿಯ ಮಾಹಿತಿ ಸಿಕ್ಕಿಲ್ಲ. ಇವರು ತಮ್ಮ ಪ್ರಸ್ತುತ ಮಾಹಿತಿಯನ್ನು ಭರ್ತಿ ಮಾಡಿ ಎನ್ಯುಮರೇಶನ್ ಫಾರ್ಮ್ ಹಿಂತಿರುಗಿಸಿದ್ದಾರೆ.ಆಗಸ್ಟ್ 24ರ ಬಳಿಕ ಅನ್ ಮ್ಯಾಪಿಂಗ್ ಎಂದು ಗುರುತಿಸಿರುವ 23,844 ಮತದಾರರಿಗೆ ನೋಟಿಸ್ ನೀಡಲಾಗುತ್ತದೆ.ಆ ಸಂದರ್ಭದಲ್ಲಿ ಚುನಾವಣಾ ಆಯೋಗ ಸೂಚಿಸಿರುವ ದಾಖಲೆಗಳನ್ನು ಸಲ್ಲಿಸಿ,ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಬೇಕು.ದಾಖಲೆ ಸಲ್ಲಿಸದ ಮತದಾರರ ಹೆಸರು ಅಕ್ಟೋಬರ್ 27ರಂದು ಪ್ರಕಟಗೊಳ್ಳಲಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಪ್ರಕಟಗೊಳ್ಳುವುದಿಲ್ಲ.
ರಾಜ್ಯದಲ್ಲಿ 25,77,842 ಮತದಾರರು ನೋ ಮ್ಯಾಪಿಂಗ್ ಪಟ್ಟಿಯಲ್ಲಿ ಇದ್ದಾರೆ.ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ಸೇರಿ,1998 ಮತದಾರರು ಎನ್ಯುಮರೇಶನ್ ಫಾರ್ಮ್ ಅನ್ನು ಆನ್ ಲೈನ್ ಮೂಲಕ ಭರ್ತಿ ಮಾಡಿದ್ದು,ಇವರೆಲ್ಲರ ಎನ್ಯುಮರೇಶನ್ ಫಾರ್ಮ್ ಬಿಎಲ್ಒ ಪರಿಶೀಲಿಸಿ ನೋಂದಾಣಿ ಮಾಡಿಕೊಂಡಿದ್ದಾರೆ.1,73,445 ಮತದಾರರು ಸೆಲ್ಫ್ ಮ್ಯಾಪಿಂಗ್ ಹಾಗೂ 2,08,335 ಮತದಾರರು ಪ್ರೊಜಿನಿ ಮ್ಯಾಪಿಂಗ್ ಮಾಡಿಕೊಂಡಿದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಒಟ್ಟು 2,38,447 ಮತದಾರರ ಪೈಕಿ 2,09,164 ಮಂದಿಯ ಎನ್ಯುಮರೇಶನ್ ಫಾರ್ಮ್ ಡಿಜಿಟೈಸ್ ಆಗಿದೆ,ಶೇಕಡಾ ಶೇ.87.72. ರಷ್ಟು ಎಸ್ಐಆರ್ ಪೂರ್ಣಗೊಂಡಿದ್ದು, 29,283 ಮತದಾರರನ್ನು ASDDO ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.
ಸೋಮವಾರಪೇಟೆ ತಾಲ್ಲೂಕಿನ 88,352 ರಲ್ಲಿ 79,957 ಫಾರ್ಮ್ ಡಿಜಿಟೈಸ್ ಆಗಿದೆ.8,395 ಮತದಾರರು ASDDO ಪಟ್ಟಿಯಲ್ಲಿ ಇದ್ದಾರೆ.ಕುಶಾಲನಗರ ತಾಲ್ಲೂಕಿನಲ್ಲಿ 93,920 ಮತದಾರರಲ್ಲಿ 81,571 ಮತದಾರರ ಫಾರ್ಮ್ ಡಿಜಿಟೈಸ್ ಆಗಿದ್ದು,12,349 ಮತದಾರರು ASDDO ಪಟ್ಟಿಯಲ್ಲಿ ಇದ್ದಾರೆ. ಮಡಿಕೇರಿ ತಾಲ್ಲೂಕಿನ 56,175 ಮತದಾರರಲ್ಲಿ 47,636 ಫಾರ್ಮ್ ಡಿಜಿಟೈಸ್ ಆಗಿದ್ದು,8,539 ಮತದಾರರು ASDDO ಪಟ್ಟಿಯಲ್ಲಿದ್ದಾರೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ
ಒಟ್ಟು 2,30,210 ಮತದಾರರ ಪೈಕಿ 1,96,669 ಮಂದಿಯ ಎನ್ಯುಮರೇಶನ್ ಡಿಜಿಟೈಸ್ ಆಗಿದೆ. ಶೇ.85.43 ರಷ್ಟು ಪ್ರಗತಿ ಸಾಧಿಸಿದೆ.33,541 ಮತದಾರರು ASDDO ಪಟ್ಟಿಯಲ್ಲಿ ಇದೆ.
ಮಡಿಕೇರಿ ತಾಲೂಕಿನ 66,646 ಮತದಾರಲ್ಲಿ, 60,588 ಮತದಾರರ ಮಾಹಿತಿ ಡಿಜಿಟೈಸ್ ಆಗಿದ್ದು,6,058 ಮತದಾರರನ್ನು ASDDO ಎಂದು ಗುರುತಿಸಲಾಗಿದೆ.
ವಿರಾಜಪೇಟೆ ತಾಲೂಕಿನ 79,942 ಮತದಾರರಲ್ಲಿ 69,450 ಮತದಾರರ ಎನ್ಯುಮರೇಶನ್ ಫಾರ್ಮ್ ಡಿಜಿಟೈಸ್ ಆಗಿದ್ದು,10,492 ಮತದಾರರು ASDDO ಪಟ್ಟಿಯಲ್ಲಿ ಇದ್ದಾರೆ.
ಪೊನ್ನಂಪೇಟೆ ತಾಲ್ಲೂಕಿನಲ್ಲಿ 83,622 ಮತದಾರರ ಪೈಕಿ 66,631ಮತದಾರರ ಎನ್ಯುಮರೇಶನ್ ಫಾರ್ಮ್ ಡಿಜಿಟೈಸ್ ಆಗಿದ್ದು,16,991 ಮತದಾರರು ASDDO ಪಟ್ಟಿಯಲ್ಲಿ ಇದ್ದಾರೆ.
ಜಿಲ್ಲೆಯಲ್ಲೇ ಪೊನ್ನಂಪೇಟೆ ತಾಲೂಕಿನಲ್ಲಿ 20.32% ಮತದಾರರು ASDDO ಪಟ್ಟಿಯಲ್ಲಿದ್ದಾರೆ. 83,622 ಮತದಾರರ ಪೈಕಿ 16,991 ಮಂದಿಯ ಹೆಸರು ಕರಡು ಪಟ್ಟಿಯಿಂದ ಹೊರಗುಳಿಯಲಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
