SIR KARNATAKA

ಎಸ್ಐಆರ್: ಕೊಡಗು ಜಿಲ್ಲೆಯಲ್ಲಿ 63,348 ಮತದಾರರ ಹೆಸರು ಕರಡು ಪಟ್ಟಿಯಿಂದ ಡಿಲೀಟ್

admincoorgdaily

ಎಸ್ಐಆರ್: ಕೊಡಗು ಜಿಲ್ಲೆಯಲ್ಲಿ 63,348 ಮತದಾರರ ಹೆಸರು ಕರಡು ಪಟ್ಟಿಯಿಂದ ಡಿಲೀಟ್

ಮಡಿಕೇರಿ:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯ ಪ್ರಗತಿಯಲ್ಲಿದೆ. ಚುನಾವಣಾ ಆಯೋಗವು ಶುಕ್ರವಾರ ಸಂಜೆ 4.00 ಗಂಟೆಯ ವರದಿಯ ಪ್ರಕಾರ, ವಿತರಿಸಲಾದ 100% ಗಣತಿ ನಮೂನೆಗಳಲ್ಲಿ 86.48% ರಷ್ಟು ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ.

 ಒಟ್ಟು ಮತದಾರರ ಸಂಖ್ಯೆ 4,68,657,ಗಣತಿ ನಮೂನೆ ವಿತರಣೆ 4,68,657,ಗಣತಿ ನಮೂನೆ ಡಿಜಿಟಲೀಕರಣ 4,05,309,ಗಣತಿ ನಮೂನೆ ಸಲ್ಲಿಸದವರು 63,348. ಗಣತಿ ನಮೂನೆ ಸಲ್ಲಿಸದ 63,348 ಮತದಾರರಲ್ಲಿ ಮೃತಪಟ್ಟ ಮತದಾರರು 13,726,ಶಾಶ್ವತವಾಗಿ ಸ್ಥಳಾಂತರಗೊಂಡವರು 33,673, ಎರಡು ಕಡೆ ಹೆಸರು ಹೊಂದಿರುವವರು 5,931,Absent ಮತದಾರರು 9,901,ಇತರೆ ಕಾರಣಗಳು 117‌