SIR KARNATAKA

ಎಸ್ಐಆರ್: ಕೊಡಗಿನಲ್ಲಿ 63,635 ಮತದಾರರ ಹೆಸರು ಡಿಲೀಟ್

admincoorgdaily

ಎಸ್ಐಆರ್: ಕೊಡಗಿನಲ್ಲಿ 63,635 ಮತದಾರರ ಹೆಸರು ಡಿಲೀಟ್

ಮಡಿಕೇರಿ:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯವು ಕೊಡಗು ಜಿಲ್ಲೆಯಲ್ಲಿ ಭರದಿಂದ ಸಾಗಿದೆ. 06.08.2026 ರ ಸಂಜೆ 4 ಗಂಟೆಯ ವರದಿ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ 86.42% ಗಣತಿ ನಮೂನೆಗಳ ಡಿಜಿಟಲೀಕರಣ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.

ಒಟ್ಟು ಮತದಾರರ ಸಂಖ್ಯೆ 4,68,657,ಗಣತಿ ನಮೂನೆ ವಿತರಣೆ 4,68,657, ಡಿಜಿಟಲೀಕರಣಗೊಂಡ ನಮೂನೆ 4,05,022, ಗಣತಿ ನಮೂನೆ ಸಲ್ಲಿಸದವರ ವಿವರ 63,635,ಗಣತಿ ನಮೂನೆ ಸಲ್ಲಿಸದ 63,635 ಮತದಾರರಲ್ಲಿ ಮೃತಪಟ್ಟ ಮತದಾರರು 13,727,ಶಾಶ್ವತವಾಗಿ ಸ್ಥಳಾಂತರಗೊಂಡವರು 33,803, ಎರಡು ಕಡೆ ಹೆಸರು ಹೊಂದಿರುವವರು 5,884, Absent ಮತದಾರರು 10,100, ಇತರೆ ಕಾರಣಗಳು 121.