SIR:ಕರ್ನಾಟಕದಲ್ಲಿ 1ಕೋಟಿ 8ಲಕ್ಷಕ್ಕೂ ಅಧಿಕ ಮಂದಿ ಮತದಾರರು ASDDO ಪಟ್ಟಿಯಲ್ಲಿ
ಬೆಂಗಳೂರು:ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ SIR - 2026 ಪ್ರಕ್ರಿಯೆಯ ದಿನನಿತ್ಯದ ಪ್ರಗತಿ ವರದಿಯನ್ನು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿ ಆಗಸ್ಟ್ 10 ರಂದು ಬಿಡುಗಡೆ ಮಾಡಿದೆ. ಜೂನ್ 16, 2026 ರಂತೆ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರು ಇದ್ದಾರೆ.
ಎಲ್ಲಾ ಮತದಾರರಿಗೂ Enumeration Form ಮುದ್ರಿಸಿ BLOಗಳಿಗೆ ವಿತರಿಸಲಾಗಿದೆ. ಸಾಮಾನ್ಯ EF ಡಿಜಿಟೈಸ್ 4,45,34,784, ASDDO ಎಂದು ಗುರುತಿಸಲಾದವರು 1,08,97,530, ಶಾಶ್ವತವಾಗಿ ಸ್ಥಳಾಂತರ 65,79,279,ಮೃತಪಟ್ಟವರು 16,36,116,ಪತ್ತೆಯಾಗದ Absent 15,59,974,ಈಗಾಗಲೇ ದಾಖಲಾದವರು 7,00,044, ಇತರೆ 4,22,117,ಆನ್‌ಲೈನ್‌ನಲ್ಲಿ EF ಸಲ್ಲಿಸಿದವರು 7,06,143.
ASDDO ಪಟ್ಟಿಯನ್ನು ಎಲ್ಲಾ ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ ಮತ್ತು BLOಗಳ ಬಳಿಯೂ ಪರಿಶೀಲನೆಗೆ ಲಭ್ಯವಿದೆ. ತಪ್ಪಾಗಿ ASDDO ಎಂದು ಗುರುತಿಸಲ್ಪಟ್ಟ ಮತದಾರರು ಆಗಸ್ಟ್ 17, 2026 ರೊಳಗೆ BLO/ERO ಮೂಲಕ ರೋಲ್ ಬ್ಯಾಕ್ ಮಾಡಿಸಿಕೊಳ್ಳಬಹುದು ಎಂದು CEO ಕಚೇರಿ ತಿಳಿಸಿದೆ. ASDDO ಪಟ್ಟಿಯನ್ನು CEO ವೆಬ್‌ಸೈಟ್ ನಲ್ಲಿ ನೋಡಬಹುದು: https://ceo.karnataka.gov.in/asddo.htm
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
