ಎಸ್ಐಆರ್:ಕರ್ನಾಟಕದಲ್ಲಿ 23ಲಕ್ಷಕ್ಕೂ ಅಧಿಕ ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು ಪತ್ತೆ
ಬೆಂಗಳೂರು:ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ಕಚೇರಿ ಮಂಗಳವಾರ ಸಂಜೆ ಬಿಡುಗಡೆ ಮಾಡಿದ ವರದಿಯ ಪ್ರಕಾರ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ - SIR ಕಾರ್ಯವು ಅಂತಿಮ ಹಂತದಲ್ಲಿದೆ. 16.06.2026 ರಂತೆ ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆ 5,54,32,314 ಆಗಿದೆ. ವಿತರಣೆ ಮತ್ತು ಡಿಜಿಟಲೀಕರಣ ಸ್ಥಿತಿ: ರಾಜ್ಯದಲ್ಲಿ ಒಟ್ಟು 55,249,202 ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಇದು 99.67% ಆಗಿದೆ. ಇದರಲ್ಲಿ 55,711 ಮತಗಟ್ಟೆಗಳಲ್ಲಿ 100% ಮತ್ತು 2,847 ಮತಗಟ್ಟೆಗಳಲ್ಲಿ 90% ಕ್ಕಿಂತ ಹೆಚ್ಚು ವಿತರಣೆ ಆಗಿದೆ. ಡಿಜಿಟಲೀಕರಣದಲ್ಲಿ ಒಟ್ಟು 35,731,461 ನಮೂನೆಗಳನ್ನು ದಾಖಲಿಸಲಾಗಿದೆ.
ಇದು 64.46%* ಆಗಿದೆ. 19 ಮತಗಟ್ಟೆಗಳಲ್ಲಿ 100% ಮತ್ತು 9,318 ಮತಗಟ್ಟೆಗಳಲ್ಲಿ 90% ಕ್ಕಿಂತ ಹೆಚ್ಚು ಡಿಜಿಟಲೀಕರಣ ಪೂರ್ಣಗೊಂಡಿದೆ. ಇದುವರೆಗೆ 5,84,791 ಮಂದಿ ಆನ್‌ಲೈನ್ ಮೂಲಕವೇ ನಮೂನೆ ಸಲ್ಲಿಸಿದ್ದಾರೆ. ಇದು ಒಟ್ಟಿನಲ್ಲಿ 1.05% ಆಗಿದೆ. ASDDO 40,80,504, -ಪತ್ತೆಯಾಗದ/ಗೈರು 5,32,623, ಶಾಶ್ವತವಾಗಿ ಸ್ಥಳಾಂತರಗೊಂಡವರು 23,84,966, ಮೃತಪಟ್ಟ ಮತದಾರರು 9,10,560,ಈಗಾಗಲೇ ನೋಂದಾಯಿತ 2,40,889, ಇತರೆ 11,446
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
