SIR KARNATAKA

ಎಸ್ಐಆರ್: ಕರ್ನಾಟಕದಲ್ಲಿ 79 ಲಕ್ಷಕ್ಕೂ ಅಧಿಕ ಮತದಾರರು ಕರಡು ಪಟ್ಟಯಿಂದ ಡಿಲಿಟ್!

admincoorgdaily

ಎಸ್ಐಆರ್: ಕರ್ನಾಟಕದಲ್ಲಿ 79 ಲಕ್ಷಕ್ಕೂ ಅಧಿಕ ಮತದಾರರು ಕರಡು ಪಟ್ಟಯಿಂದ ಡಿಲಿಟ್!

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ - SIR ಪ್ರಕ್ರಿಯೆ ರಾಜ್ಯದಲ್ಲಿ ವೇಗ ಪಡೆದುಕೊಂಡಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮಂಗಳವಾರ ಸಂಜೆ 6 ಗಂಟೆಗೆ ಬಿಡುಗಡೆ ಮಾಡಿದ ದೈನಂದಿನ ವರದಿಯ ಪ್ರಕಾರ, ದಿನಾಂಕ 16-06-2026 ರಂತೆ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರು ಇದ್ದಾರೆ.

 ಎಲ್ಲಾ ಮತದಾರರಿಗೂ ಗಣತಿ ನಮೂನೆ - EF ಗಳ ಮುದ್ರಣ ಮತ್ತು ವಿತರಣೆ ಶೇ.100 ರಷ್ಟು ಪೂರ್ಣಗೊಂಡಿದೆ. 30-06-2026 ರಿಂದ 08-08-2026 ರವರೆಗೆ ಮನೆ ಮನೆ ಭೇಟಿ ಮತ್ತು ಡಿಜಿಟಲೀಕರಣ ಕಾರ್ಯ ನಡೆಯುತ್ತಿದೆ.

ಒಟ್ಟು ಡಿಜಿಟಲೀಕರಣಗೊಂಡ EF: 4,23,21,853 , ಮತದಾರರಿಂದ ಆನ್‌ಲೈನ್‌ನಲ್ಲಿ ಸಲ್ಲಿಕೆಯಾದ 6,57,897,ASDDO ಎಂದು ಗುರುತಿಸಲಾದವರು‌79,75,67, ಪತ್ತೆಯಾಗದ / Absent ಮತದಾರರು 10,82,554,ಶಾಶ್ವತವಾಗಿ ಸ್ಥಳಾಂತರಗೊಂಡವರು 48,59,903,ಮೃತಪಟ್ಟ ಮತದಾರರು‌ 14,67,381,ಈಗಾಗಲೇ ನೋಂದಾಯಿತ ಮತದಾರರು: 5,38,020, ಇತರೆ 27,820

ASDDO ಎಂದರೆ - Absent, Shifted, Dead, Duplicate, Others.