ಎಸ್.ಎನ್.ಡಿ.ಪಿ ಕುಶಾಲನಗರ ಶಾಖೆ ವಾರ್ಷಿಕ ಮಹಾಸಭೆ
admincoorgdaily

ಕುಶಾಲನಗರ : ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ( ಎಸ್.ಎನ್.ಡಿ.ಪಿ ) ಕುಶಾಲನಗರ ಶಾಖೆಯ ವಾರ್ಷಿಕ ಮಹಾಸಭೆ ಭಾನುವಾರ ನಗರದ ಕೇರಳ ಸಮಾಜದ ಕಟ್ಟಡದ ಸಭಾಂಗಣದಲ್ಲಿ ,ಎಸ್.ಎನ್.ಡಿ.ಪಿ ಕುಶಾಲನಗರ ತಾಲ್ಲೂಕು ಅಧ್ಯಕ್ಷರಾದ ಕೆ.ಟಿ.ಗಣೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಯೂನಿಯನ್ ಅಧ್ಯಕ್ಷರಾದ ವಿ.ಕೆ.ಲೋಕೇಶ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು .ನಂತರ ಮಾತನಾಡಿ ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ಸಂಘಟನೆಯು ನಡೆದು ಬಂದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು .
ಪ್ರಾಸ್ತಾವಿಕ ಮಾತುಗಳನ್ನು ಹಾಗೂ ಲೆಕ್ಕ -ಪತ್ರವನ್ನು ಎಸ್.ಎನ್.ಡಿ.ಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅನೀಶ್ ಕುಮಾರ್ ಮಂಡಿಸಿದರು .ಸಭೆಯಲ್ಲಿ ಸಂಘದ ಅಭಿವೃದ್ಧಿ ಹಾಗೂ ನೂತನ ಸದಸ್ಯರ ಸದಸ್ಯತ್ವ ಪಡೆಯುವ ಬಗ್ಗೆ ಚರ್ಚೆ ನಡೆಯಿತು.
ವೇದಿಕೆಯಲ್ಲಿ ಎಸ್.ಎನ್.ಡಿ.ಪಿ ತಾಲ್ಲೂಕು ಸಂಘದ ಉಪಾಧ್ಯಕ್ಷ ಆರ್.ರಾಜನ್.ಯುನಿಯನ್ ಕೌನ್ಸಿಲರ್ ಆರ್.ಗಿರೀಶ್. ಯುನಿಯನ್ ಸದಸ್ಯ ಟಿ.ಎಸ್.ಉದಯ್.ಎಸ್.ಎನ್.ಡಿ.ಪಿ ಮಹಿಳಾ ವಿಭಾಗದ ತಾಲ್ಲೂಕು ಅಧ್ಯಕ್ಷೆ ಸವಿತಾ.ಕಾರ್ಯದರ್ಶಿ ಶ್ರೀಜಾ ರಾಜೇಶ್ ಉಪಸ್ಥಿತರಿದ್ದರು. ವಾರ್ಷಿಕ ಸಭೆಯಲ್ಲಿ ಸಂಘದ ನೂರಾರು ಸದಸ್ಯರು ಪಾಲ್ಗೊಂಡಿದ್ದರು.
ವರದಿ.ಟಿ.ಆರ್.ಪ್ರಭುದೇವ್ ಕುಶಾಲನಗರ