ಜು.11-12ಕ್ಕೆ ನಾಪೋಕ್ಲುವಿನಲ್ಲಿ ಎಸ್‌ಎಸ್‌ಎಫ್ ಸಾಹಿತ್ಯೋತ್ಸವ
admincoorgdaily

ಮಡಿಕೇರಿ: ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸುವ ಮತ್ತು ಸಾಹಿತ್ಯ-ಸಂಸ್ಕಾರ ಬೆಳೆಸುವ ಉದ್ದೇಶದ ಎಸ್‌ಎಸ್‌ಎಫ್ ಮಡಿಕೇರಿ ಡಿವಿಷನ್ ಸಾಹಿತ್ಯೋತ್ಸವ–2026 ಇದೇ ಜುಲೈ 11 ಮತ್ತು 12 ರಂದು ನಾಪೋಕ್ಲು ಮಾರುಕಟ್ಟೆ ಮೈದಾನದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಿವಿಷನ್ ಸಂಯೋಜಕ ಮಹಮ್ಮದ್ ರಾಫಿ ಹಿಮಮಿ ಸಖಾಫಿ ಅಯ್ಯಂಗೇರಿ, ಸಾಹಿತ್ಯೋತ್ಸವದಲ್ಲಿ ಮಡಿಕೇರಿ ಡಿವಿಷನ್‌ನ 3 ಸೆಕ್ಟರ್‌ಗಳ 28 ಘಟಕಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಭಾಷಣ, ಪ್ರಬಂಧ, ಕವನ, ಕಥೆ, ರಸಪ್ರಶ್ನೆ, ಚಿತ್ರಕಲೆ, ಕ್ಯಾಲಿಗ್ರಫಿ, ವಾಚನ, ಭಾಷಾಂತರ ಮತ್ತು ವೇದಿಕೆ ಕಾರ್ಯಕ್ರಮಗಳು ಸೇರಿದಂತೆ ನೂರಾರು ಸಾಹಿತ್ಯ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಜರುಗಲಿವೆ.
ಜು.11ರಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಸಾಹಿತಿ ಮತ್ತು ಕಲಾವಿದ ನೆರವಂಡ ಉಮೇಶ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜಕೀಯ ವ್ಯಕ್ತಿಗಳು, ಸಾಹಿತಿಗಳು ಮತ್ತು ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಂಯೋಜಕರು ತಿಳಿಸಿದರು. ಎಸ್‌ಎಸ್‌ಎಫ್ ಮಡಿಕೇರಿ ಡಿವಿಷನ್ ಝುಬೈರ್, ಜಂಶೀರ್ ಸಖಾಫಿ, ಹಾರಿಸ್ ಝಹ್ರಿ, ಜುನೈದ್, ಸುದ್ದಿಗೋಷ್ಠಿಯಲ್ಲಿ ಇದ್ದರು.