Kodagu

ಎಸ್.ಎಸ್.ಎಲ್.ಸಿ ಪರೀಕ್ಷಾ ಮರುಮೌಲ್ಯಮಾಪನ ಫಲಿತಾಂಶ; ಕುಶಾಲನಗರ ಬಾಲಕಿಯರ ಪ್ರೌಢಶಾಲೆ, ಹೆಬ್ಬಾಲೆ ಪ್ರೌಢಶಾಲೆಗೆ ಶೇಕಡಾ100 ಫಲಿತಾಂಶ

admincoorgdaily

ಎಸ್.ಎಸ್.ಎಲ್.ಸಿ  ಪರೀಕ್ಷಾ ಮರುಮೌಲ್ಯಮಾಪನ ಫಲಿತಾಂಶ; ಕುಶಾಲನಗರ ಬಾಲಕಿಯರ ಪ್ರೌಢಶಾಲೆ, ಹೆಬ್ಬಾಲೆ ಪ್ರೌಢಶಾಲೆಗೆ ಶೇಕಡಾ100 ಫಲಿತಾಂಶ

ಕುಶಾಲನಗರ, ಮೇ.20: ಏಪ್ರಿಲ್ ತಿಂಗಳಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಮರು ಮೌಲ್ಯಮಾಪನದ ನಂತರ ತಾಲ್ಲೂಕಿನ ಹೆಬ್ಬಾಲೆ ಪ್ರೌಢಶಾಲೆ ಹಾಗೂ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ತಿಳಿಸಿದ್ದಾರೆ.

ಕುಶಾಲನಗರ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಓರ್ವ ವಿದ್ಯಾರ್ಥಿನಿಯು ಮರು ಮೌಲ್ಯಮಾಪನದಲ್ಲಿ ತೇರ್ಗಡೆ ಹೊಂದಿದ್ದು, ಶಾಲೆಯ ಎಲ್ಲಾ 30 ವಿದ್ಯಾರ್ಥಿಗಳು ಕೂಡ ತೇರ್ಗಡೆ ಹೊಂದಿದ ಪರಿಣಾಮ ಶಾಲೆಗೆ ಶೇ.100 ಫಲಿತಾಂಶ ಬಂದಿದೆ.

 ಹಾಗೆಯೇ, ತಾಲ್ಲೂಕಿನ ಹೆಬ್ಬಾಲೆ ಪ್ರೌಢಶಾಲೆ‌ ಯ ಒರ್ವ ವಿದ್ಯಾರ್ಥಿ ಕೂಡ ಮರು ಮೌಲ್ಯಮಾಪನದಲ್ಲಿ ತೇರ್ಗಡೆ ಹೊಂದಿದ್ದು, ಶಾಲೆಯ ಎಲ್ಲಾ 37 ವಿದ್ಯಾರ್ಥಿಗಳು ಕೂಡ ತೇರ್ಗಡೆ ಹೊಂದಿದ ಪರಿಣಾಮ ಶಾಲೆಗೆ ಶೇ.100 ಫಲಿತಾಂಶ ಬಂದಿದೆ ಎಂದು ತಿಳಿಸಲಾಗಿದೆ. ಇದರಿಂದ ತಾಲ್ಲೂಕಿನಲ್ಲಿ ಮೊದಲು 39 ಪ್ರೌಢಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿದ್ದು, ಇದೀಗ 2 ಪ್ರೌಢಶಾಲೆಗಳು ಶೇ.100 ಫಲಿತಾಂಶ ಗಳಿಸಿದ ಹಿನ್ನೆಲೆಯಲ್ಲಿ ಸೋಮವಾರಪೇಟೆ ಶೈಕ್ಷಣಿಕ ತಾಲ್ಲೂಕಿನ 41 ಪ್ರೌಢಶಾಲೆಗಳು ಶೇ.100 ಫಲಿತಾಂಶ ಗಳಿಸಿವೆ ಎಂದು ಬಿಇಓ ಕೃಷ್ಣಪ್ಪ ತಿಳಿಸಿದ್ದಾರೆ.