SSLC ರಿಸಲ್ಟ್ ದಿನಾಂಕ ಘೋಷಣೆ

Apr 22, 2026 - 20:20
 0  1.2k
SSLC ರಿಸಲ್ಟ್ ದಿನಾಂಕ ಘೋಷಣೆ

ಬೆಂಗಳೂರು, (ಏಪ್ರಿಲ್ 22): ಹಲವು ಗೊಂದಲಗಳ ನಡುವೆಯೂ ಎಸ್​​ಎಸ್​​ಎಲ್​​ಸಿ (10ನೇ ತರಗತಿ) ಫಲಿತಾಂಶ (SSLC Result 2026) ಪ್ರಕಟಕ್ಕೆ ಮುಹೂರ್ತ ನಿಗದಿಯಾಗಿದೆ. ನಾಳೆ (ಏಪ್ರಿಲ್ 23) 12 ಗಂಟೆಗೆ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಈ ಬಗ್ಗೆ ಸ್ವತಃ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಘೋಷಣೆ ಮಾಡಿದ್ದಾರೆ.

ಅಲ್ಲದೇ ಹಿಂದಿ ವಿಷಯ ಸಂಬಂಧ ಕೋರ್ಟ್ ಆದೇಶ ಪಾಲಿಸುವ ಬಗ್ಗೆ ನಿರ್ಧರಿಸಲಾಗಿದೆ. ಪ್ರಸಕ್ತ ಸಾಲಿಗೆ ಹಿಂದಿ ಭಾಷೆಗೆ ಅಂಕದ ಬದಲಿಗೆ ಗ್ರೇಡ್ ನೀಡಲು ತೀರ್ಮಾನಿಸಲಾಗಿತ್ತು. ಆದ್ರೆ, ಇದೀಗ ಹೈಕೋರ್ಟ್ ಗ್ರೇಡ ಬದಲು ಅಂಕ ನೀಡುವಂತೆ ಆದೇಶಿಸಿದೆ. ಈ ಸಂಬಂಧ ಮಧು ಬಂಗಾರಪ್ಪ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದು, ಸಭೆಯಲ್ಲಿ ಹೈಕೋರ್ಟ್ ಆದೇಶ ಪಾಲಿಸುವ ಬಗ್ಗೆ ನಿರ್ಧರಿಸಲಾಗಿದೆ.

What's Your Reaction?

Like Like 7
Dislike Dislike 0
Love Love 2
Funny Funny 0
Angry Angry 0
Sad Sad 1
Wow Wow 1