Kodagu

ಎಸ್.ಎಸ್.ಎಲ್.ಸಿ ಫಲಿತಾಂಶ:ಕೊಡಗು ಜಿಲ್ಲೆಯ 84 ಶಾಲೆಗಳಿಗೆ ಶೇಕಡಾ 100 ರಷ್ಟು ಫಲಿತಾಂಶ

admincoorgdaily

ಎಸ್.ಎಸ್.ಎಲ್.ಸಿ ಫಲಿತಾಂಶ:ಕೊಡಗು ಜಿಲ್ಲೆಯ 84 ಶಾಲೆಗಳಿಗೆ ಶೇಕಡಾ 100 ರಷ್ಟು ಫಲಿತಾಂಶ

ಮಡಿಕೇರಿ:ಕೊಡಗು ಜಿಲ್ಲೆಯಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ‌ ಪರೀಕ್ಷೆಯಲ್ಲಿ 140 ಪ್ರೌಢ ಶಾಲೆಗಳಲ್ಲಿ 84 ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿರುವುದು ವಿಶೇಷವಾಗಿದೆ. ಇದರಲ್ಲಿ ಸರ್ಕಾರಿ ಪ್ರೌಢ ಶಾಲೆಯ 47 ರಲ್ಲಿ 37 ಪ್ರೌಢ ಶಾಲೆಗಳು ಶೇ.100 ರಷ್ಟು ಫಲಿತಾಂಶ, ಅನುದಾನಿತ 40 ಪ್ರೌಢ ಶಾಲೆಗಳಲ್ಲಿ 10 ಶಾಲೆಗಳು ಶೇ.100 ರಷ್ಟು, ಅನುದಾನ ರಹಿತ 53 ಪ್ರೌಢ ಶಾಲೆಯಲ್ಲಿ 37 ಪ್ರೌಢ ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿವೆ. ಒಟ್ಟಾರೆ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ 5,948 ವಿದ್ಯಾರ್ಥಿಗಳಲ್ಲಿ 5742 ವಿದ್ಯಾರ್ಥಿಗಳು ಉತ್ತೀರ್ಣರಾಗಿ, 206 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.