SYS ವಿರಾಜಪೇಟೆ ವಲಯದಿಂದ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Aug 13, 2026 - 19:45
 0  57
SYS ವಿರಾಜಪೇಟೆ ವಲಯದಿಂದ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ವಿರಾಜಪೇಟೆ: ದೇಶದ 80ನೇ ಸ್ವತಂತ್ರೋತ್ಸವದ ಅಂಗವಾಗಿ SYS ವಿರಾಜಪೇಟೆ ವಲಯ ಹಾಗೂ ಇಸಾಬಾ ವತಿಯಿಂದ ವಿರಾಜಪೇಟೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ದಿನದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಲಯ ಅಧ್ಯಕ್ಷರಾದ ಹಂಸ ಮದನಿ ಅವರು, "ಸಂಘಟನೆಗಳು ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೆ ಸಾಮಾಜಿಕ ಕಳಕಳಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಒತ್ತು ನೀಡಬೇಕು. ಆಂಗ್ಲರ ದಾಸ್ಯದಿಂದ ಮುಕ್ತಿಗೊಂಡು 80 ವರ್ಷ ಸಂದಿರುವ ಈ ಸುಸಂದರ್ಭವನ್ನು ಅರ್ಥಪೂರ್ಣಗೊಳಿಸಲು ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿದೆ" ಎಂದರು.

 "ಸರ್ಕಾರಿ ಆಸ್ಪತ್ರೆಗಳು ದೇವಾಲಯದಂತೆ. ರೋಗಿಗಳಿಗೆ ಉತ್ತಮ ಪರಿಸರ ಒದಗಿಸುವುದು ನಮ್ಮೆಲ್ಲರ ಕರ್ತವ್ಯ. ಅದೇ ಮಹೋನ್ನತ ಭಾವನೆಯಿಂದ ಸ್ವಚ್ಛತೆಗೆ ಆದ್ಯತೆ ನೀಡಿದ್ದೇವೆ" ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಯ್ಯದ್ ಶಿಹಾಬ್*, ಇಸಾಬಾ ಕಾರ್ಯದರ್ಶಿ ಆಲಿ ಕೆ.ಜೆ., ಉಪಾಧ್ಯಕ್ಷ ಸಾದಿಕ್, ಮಿಸ್ಮಾಯಿ ರಾಜ್ಯ ಧಾವಾ ಕಾರ್ಯದರ್ಶಿ ಅಹಮದ್ ಮದನಿ, ಜಿಲ್ಲಾ ಸದಸ್ಯರಾದ ಸಲಾಂ ಗೋಣಿಕೊಪ್ಪ, ಸಿದ್ದಿಕ್ ಸಿದ್ದಾಪುರ ಮತ್ತು ಸಂಘಟನೆಯ ಇತರ ಸದಸ್ಯರು ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0