Kodagu

ಕೆಪಿಎಸ್ ಪ್ರಾಥಮಿಕ ವಿಭಾಗದಲ್ಲಿ ‘ಸಚೇತನಾ’ ಕಾರ್ಯಕ್ರಮ

admincoorgdaily

ಕೆಪಿಎಸ್ ಪ್ರಾಥಮಿಕ ವಿಭಾಗದಲ್ಲಿ ‘ಸಚೇತನಾ’ ಕಾರ್ಯಕ್ರಮ

ಪೊನ್ನಂಪೇಟೆ, ಆ.11: ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಪ್ರಾಥಮಿಕ ವಿಭಾಗದಲ್ಲಿ ಸೋಮವಾರ ‘ಸಚೇತನಾ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

 ಕಾರ್ಯಕ್ರಮದ ಅಂಗವಾಗಿ 16ನೇ ಶತಮಾನದ ವೀರರಾಣಿ ಚೆನ್ನಭೈರಾದೇವಿಯ ಆಡಳಿತ, ಧೈರ್ಯ ಹಾಗೂ ಸಾಧನೆಗಳನ್ನು ಆಧರಿಸಿದ ಸಂಕ್ಷಿಪ್ತ ನಾಟಕವನ್ನು 4ನೇ ತರಗತಿಯ ವಿದ್ಯಾರ್ಥಿಗಳು ಅಭಿನಯದ ಮೂಲಕ ಪ್ರಸ್ತುತಪಡಿಸಿದರು. ಐತಿಹಾಸಿಕ ವಿಷಯವನ್ನು ವಿದ್ಯಾರ್ಥಿಗಳು ಪಾತ್ರಧಾರಿಗಳಾಗಿ ಮೂಡಿಬಂದಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು.

ವೀರರಾಣಿ ಚೆನ್ನಭೈರಾದೇವಿ ಪಾತ್ರದಲ್ಲಿ ಕುಮಾರಿ ತನಿಷ ಪಿಳ್ಳೆ ಪಿ.ವಿ., ಮಂತ್ರಿ ಪಾತ್ರದಲ್ಲಿ ಕುಮಾರಿ ಜೆಶಿಕ ಹೆಚ್.ಎಸ್. ಹಾಗೂ ಆಸ್ಥಾನಿಕರಾಗಿ ವಿಷ್ಣುವರ್ಧನ್ ಸಿ. ಮತ್ತು ಪ್ರೀತಂ ಪೂರ್ಣಚಂದ್ರ ಎನ್.ವಿ. ಅಭಿನಯಿಸಿದರು. ವಿದ್ಯಾರ್ಥಿಗಳ ಈ ಚಟುವಟಿಕೆಗೆ ತರಗತಿ ಶಿಕ್ಷಕಿಯರಾದ ದಾಕ್ಷಾಯಣಿ ಎನ್.ಎಸ್. ಹಾಗೂ ಮಂಜುಳಾ ಆರ್. ಮಾರ್ಗದರ್ಶನ ನೀಡಿದರು. ಮಕ್ಕಳನ್ನು ಐತಿಹಾಸಿಕ ಪಾತ್ರಗಳಿಗೆ ಸಜ್ಜುಗೊಳಿಸುವಲ್ಲಿ ಪೋಷಕರು ಸಹ ಸಹಕಾರ ನೀಡಿದರು.

 ವಿಶೇಷವಾಗಿ ತನಿಷ ಪಿಳ್ಳೆ ಅವರ ತಾಯಿ ಸ್ಮಿತಾ ಟಿ.ಎಂ. ಅವರು ಮಕ್ಕಳ ಅಲಂಕಾರ ಹಾಗೂ ಕಾರ್ಯಕ್ರಮದ ಸಿದ್ಧತೆಯಲ್ಲಿ ಸಲಹೆ-ಸಹಕಾರ ನೀಡಿದರು. ವಿದ್ಯಾರ್ಥಿಗಳು ಐತಿಹಾಸಿಕ ಘಟನೆಗಳನ್ನು ಅಭಿನಯದ ಮೂಲಕ ಪರಿಣಾಮಕಾರಿಯಾಗಿ ಪರಿಚಯಿಸಿದುದಕ್ಕೆ ಮುಖ್ಯ ಶಿಕ್ಷಕ ಬಿ.ಎಂ ವಿಜಯ್ ಹಾಗೂ ಶಿಕ್ಷಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.