ಕೇಸರಿ ಶಾಲು ಧಾರ್ಮಿಕ ಸಂಕೇತವಲ್ಲ ;ಸರ್ಕಾರದ ನಿಲುವು ಸಮರ್ಥಿಸಿಕೊಂಡ ಎ.ಎಸ್ ಪೊನ್ನಣ್ಣ

May 16, 2026 - 09:18
 0  805
ಕೇಸರಿ ಶಾಲು ಧಾರ್ಮಿಕ ಸಂಕೇತವಲ್ಲ ;ಸರ್ಕಾರದ ನಿಲುವು ಸಮರ್ಥಿಸಿಕೊಂಡ ಎ.ಎಸ್ ಪೊನ್ನಣ್ಣ

ಮಡಿಕೇರಿ: ರಾಜ್ಯ ಸರ್ಕಾರ   ಹಿಜಾಬ್‌ಗೆ ಅವಕಾಶ ನೀಡಿದ ವಿಚಾರದ ಬಗ್ಗೆ ಪರ ವಿರೋಧಿಗಳು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ, ಕೇಸರಿ ಶಾಲು ಯಾವುದೇ ಧಾರ್ಮಿಕ ಮೌಲ್ಯಗಳ ಸಂಕೇತವಾಗಿ ಹಿಂದೂಗಳು ಯಾವತ್ತು ಬಳಸಲ್ಲಿಲ್ಲ ಎಂಬ ವಿವಾದಾತ್ಮಕ ಹೇಳಿಕೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ  ಹೇಳಿದ್ದಾರೆ.

ರಾಜ್ಯ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಮೌಲ್ಯಗಳನ್ನು ಪಾಲಿಸಿಕೊಂಡು ಬರಬಹುದು. ಆದರೆ ಶಿಕ್ಷಣ ಸಂಸ್ಥೆಗಳಲ್ಲಿ  ಹೊಸ ಪರಂಪರೆಗಳನ್ನ ಪ್ರಾರಂಭಿಸಲು ಅವಕಾಶ ಇರಬಾರದು ಎಂಬುದಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆಯ ಭದ್ರತೆಯನ್ನು ಕಾಪಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರ ತೀರ್ಮಾನ ಮಾಡಿದೆ ಎಂದು ಸಮರ್ಥನೆ ಮಾಡಿಕೊಂಡರು.

ಮೊನ್ನೆ ಪರೀಕ್ಷೆ ಬರೆಯಲು ಹೋದ ಸಂದರ್ಭದಲ್ಲಿ ಜನಿವಾರದ ವಿಚಾರದಲ್ಲಿ ಗಲಾಟೆ ಆಯ್ತು ಜನಿವಾರ ಹಾಕಿಕೊಂಡು ಹೋಗುವವರನ್ನ ಬೀಡಬೇಕಾ ಬೇಡ್ವಾ? ಜನಿವಾರಕ್ಕೂ ಶಿಕ್ಷಣ ಭದ್ರತೆಗೂ ಯಾವುದೇ ಸಂಬಂಧ ಇಲ್ಲ. ಜನಿವಾರಕ್ಕೂ ಅವಕಾಶ ನೀಡಬೇಕು ಎಂದು ಆದೇಶ ಮಾಡಿದ್ದೇವೆ. ರುದ್ರಾಕ್ಷಿ ಮಾಲೆ ಹಾಕಿಕೊಂಡು ಬಂದವರನ್ನು ತಡೆಯಬಾರದು ಎಂದು ಅದೇಶ ಮಾಡಿದ್ದೇವೆ. ಹೀಗಿರುವಾಗ ಹಿಜಾಬ್ ಮಾತ್ರ ಬೀಡಬೇಕಾ? ಎಂದು ಪ್ರಶ್ನಿಸಿದರು

ಯಾವುದು ಅವರಿಗೆ ಸೂಕ್ತ ಅದನ್ನು ಮಾತ್ರ ತೆಗೆದುಕೊಂಡು ಧರ್ಮಗಳ ಮದ್ಯೆ ಒಡಕು ತರುವ ಪ್ರಯತ್ನ ನಡೆಸುತ್ತಿದ್ದಾರೆ. ದೇಶದಲ್ಲಿ ಬೆಲೆ ಏರಿಕೆ ಆಗಿದೆ. ಎಷ್ಟು ಆಗಿದೆ? ಇಂದು ತೈಲ ಬೆಲೆ, ಡಾಲರ್ ಬೆಲೆ, ಚಿನ್ನದ ಬೆಲೆ, ಎಲ್‌ಪಿಜಿ ಬೆಲೆ ಮತ್ತು ಡಾಂಬರ್ ಬೆಲೆ ಮೂರರಷ್ಟಾಗಿದೆ. ಅದಕ್ಕೆ ಮಾತಾನಾಡಿ, ಅಂದ್ರೆ ಇದಕ್ಕೆ ಮಾತ್ರ ಮಾತಾನಾಡುತ್ತಾರೆ. ಕೇಸರಿ ಶಾಲು ಯಾವುದೇ ಧಾರ್ಮಿಕ ಮೌಲ್ಯಗಳ ಸಂಕೇತವಾಗಿ ಹಿಂದೂಗಳು ಯಾವತ್ತು ಬಳಸಿಲ್ಲ. ಕೆಲವು ಸಂದರ್ಭಗಳಲ್ಲಿ ಮಾತ್ರ ಕೇಸರಿ ಶಾಲುಗಳನ್ನು ಬಳಸುತ್ತಾರೆ. ಕಾರ್ಯಕ್ರಮಗಳಲ್ಲಿ ದೇವಾಲಯ ಮತ್ತು ಇತರ ಧಾರ್ಮಿಕ ಆಚರಣೆಗಳಲ್ಲಿ ಬಳಸುತ್ತಾರೆ. ಆದ್ದರಿಂದ ಕೇಸರಿ ಶಾಲು ಮತ್ತು ಹಿಜಾಬ್ ಹೋಲಿಕೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಸರ್ಕಾರ ಎಲ್ಲ ಧರ್ಮಗಳ ಭಾವನೆಗಳನ್ನು ಗೌರವಿಸಿ ಕಾನೂನುಬದ್ಧವಾಗಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಅವರು ಸ್ಪಷ್ಟಪಡಿಸಿದರು.

What's Your Reaction?

Like Like 3
Dislike Dislike 0
Love Love 1
Funny Funny 1
Angry Angry 0
Sad Sad 0
Wow Wow 0