ಮಕೇ೯ರಾ ಡೌನ್ಸ್ ಗಾಲ್ಪ್ ಕ್ಲಬ್ ನಲ್ಲಿ ಸಾಖಮುರಿ ಕಪ್ ಗಾಲ್ಫ್ ಟೂನಿ೯ - ಕೆ.ಪಿ. ರಂಜಿತ್ ಚಾಂಪಿಯನ್

Dec 10, 2025 - 11:58
Dec 10, 2025 - 12:22
 0  68
ಮಕೇ೯ರಾ ಡೌನ್ಸ್  ಗಾಲ್ಪ್ ಕ್ಲಬ್ ನಲ್ಲಿ ಸಾಖಮುರಿ ಕಪ್  ಗಾಲ್ಫ್  ಟೂನಿ೯ - ಕೆ.ಪಿ. ರಂಜಿತ್ ಚಾಂಪಿಯನ್

ಮಡಿಕೇರಿ ಡಿ.10- ಮಡಿಕೇರಿ ಡೌನ್ಸ್ ಗಾಲ್ಪ್ ಕ್ಲಬ್ ನಲ್ಲಿ ಜರುಗಿದ 21 ನೇ ಆವೖತ್ತಿಯ ಸಾತಪ್ಪನ್ ಕಪ್ ಗಾಲ್ಪ್ ಚಾಂಪಿಯನ್ ಶಿಪ್ ನಲ್ಲಿ ಮಡಿಕೇರಿಯ ಕೆ.ಪಿ. ರಂಜಿತ್ ಚಾಂಪಿಯನ್ ಶಿಪ್ ತನ್ನದಾಗಿಸಿಕೊಂಡರೆ, ಮಾಲೀ ಶಶಿಕಿರಣ್ ದ್ವಿತೀಯ ಸ್ಥಾನ ಗಳಿಸಿದರು. ಎರಡು ದಿನಗಳ ಗಾಲ್ಪ್ ಪಂದ್ಯಾವಳಿಯಲ್ಲಿ 71 ಗಾಲ್ಪರ್ ಗಳು ಪಾಲ್ಗೊಂಡಿದ್ದರು.

 ವಿವಿಧ ವಿಭಾಗಗಳಲ್ಲಿ ಕೆ.ಯು. ವಿಕ್ರಾಂತ್, ಎಚ್.ಎಲ್. ಸಂಜಯ್, ಕೆ.ಎನ್. ಅಪ್ಪಣ್ಣ , ಎಂ.ಎನ್. ಸೋಮಯ್ಯ, ಕೆ.ಹರೀಶ್ ಅಪ್ಪಣ್ಣ, ಎಂ.ಎ.ಪೂಣಚ್ಚ, ಡಿ.ಜಿ. ಕಿಶೋರ್, ಟ್ರೋಪಿ ವಿಜೇತರಾದರೆ ಮಹಿಳೆಯರ ವಿಭಾಗದಲ್ಲಿ ಶ್ವೇತಾ ರಾಮು, ಪ್ರಥಮ, ಮೖಣಾಲಿನಿ ಚಿಣ್ಣಪ್ಪ ದ್ವಿತೀಯ ಸ್ಥಾನ ಪಡೆದರು. ಲಾಂಗೆಸ್ಟ್ ಡ್ರೈವ್ ವಿಭಾಗದಲ್ಲಿ ಅಖಿಲ್ ಮುತ್ತಣ್ಣ ಮತ್ತು ಕ್ಲೋಸೆಸ್ಟ್ ಡ್ರೈವ್ ವಿಭಾಗದಲ್ಲಿ ಕೆ.ಪಿ.ರಂಜಿತ್ ಬಹುಮಾನ ತನ್ನದಾಗಿಸಿಕೊಂಡರು.

ಮಕೇ೯ರಾ ಡೌನ್ಸ್ ಗಾಲ್ಪ್ ಕ್ಲಬ್ ಅಧ್ಯಕ್ಷ ಮುತ್ತಣ್ಣ ಕಾಯ೯ಪ್ಪ , ಪಂದ್ಯಾವಳಿಯ ಪ್ರಾಯೋಜಕರಾದ ನಾಗಾಜು೯ನ್ ಸಾಖಮುರಿ, , ಪ್ರಶಾಂತ್ ಸಾಖಮುರಿ,, ಗೀತಾ ಸಾಖಮುರಿ, ಪದ್ಮಜಸಾಖಮುರಿ ಬಹುಮಾನ ವಿತರಿಸಿದರು. ಮಕೇ೯ರಾ ಡೌನ್ಸ್ ಗಾಲ್ಪ್ ಕ್ಲಬ್ ನ ಆಡಳಿತ ಮಂಡಳಿ ನಿದೇ೯ಶಕರು, ಸದಸ್ಯರು ಹಾಜರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0