Kodagu

ಗಾಂಜಾ ಮಾರಾಟ : ಅಸ್ಸಾಂ ಮೂಲದ ಕಾರ್ಮಿಕನ ಬಂಧನ

admincoorgdaily

ಗಾಂಜಾ ಮಾರಾಟ : ಅಸ್ಸಾಂ ಮೂಲದ ಕಾರ್ಮಿಕನ ಬಂಧನ

ಮಡಿಕೇರಿ: ಜು. 17: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಲತಃ ಅಸ್ಸಾಂ ನಿವಾಸಿ, ಪ್ರಸ್ತುತ ಹೊದವಾಡದಲ್ಲಿ ಟೋಟಿ ಕಾರ್ಮಿಕನಾಗಿರುವ ಅಮಿಜುಳ್ ಹಕ್ ಎಂಬಾತನನ್ನು ಪೊಲೀಸರು ಬಂಧಿಸಿ ಆತನಿಂದ 60 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಕುಯ್ಯಂಗೇರಿ ಮೂರ್ನಾಡು ರಸ್ತೆಯ ಬಸ್ ನಿಲ್ದಾಣ ಸಮೀಪ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.