ಸಂಪಾಜೆ;ಕಾರು ಮತ್ತು ಆಟೋ ರಿಕ್ಷಾ ಡಿಕ್ಕಿ;ರಿಕ್ಷಾ ಚಾಲಕ ಮೃತ್ಯು
admincoorgdaily

ಮಡಿಕೇರಿ; ಕಾರೊಂದು ರಿಕ್ಷಾಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದು ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಸ್ಥಳದಲ್ಲಿ ಮೃತ ಪಟ್ಟ ಘಟನೆ ಕೊಡಗು ಸಂಪಾಜೆ ಗೇಟಿನ ಬಳಿ ಸಂಭವಿಸಿದೆ. ತಿರುವಿನಲ್ಲಿ ಹಿಂದಿನಿಂದ ಬಂದ ಕಾರು ಗುದ್ದಿ ಪರಾರಿಯಾಗಿದ್ದು ರಿಕ್ಷಾ ಚಾಲಕ ಸುಂದರ ಚಿನ್ನಕ್ಕಾನ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ಪ್ರಯಾಣಿಕನಿಗೂ ಗಾಯಗಳಾಗಿವೆ.