Kodagu

ಸಂಪಾಜೆ:ಸೊಸೈಟಿಯ ಮಹಾಸಭೆಯಲ್ಲಿ ಮಾತನಾಡುತ್ತಿರುವಾಗಲೇ ಹೃದಯಾಘಾತ

admincoorgdaily

ಸಂಪಾಜೆ:ಸೊಸೈಟಿಯ ಮಹಾಸಭೆಯಲ್ಲಿ ಮಾತನಾಡುತ್ತಿರುವಾಗಲೇ ಹೃದಯಾಘಾತ

ಮಡಿಕೇರಿ: ಸಹಕಾರಿ ಧುರೀಣ ಹಾಗೂ ಚೆಂಬು ಗ್ರಾ.ಪಂ. ಮಾಜಿ ಅಧ್ಯಕ್ಷ ಆದಂ ಕುಂಞಿ ಸಂಟ್ಯಾರ್ ನಿಧನ ಚೆಂಬು ಗ್ರಾ.ಪಂ. ಮಾಜಿ ಅಧ್ಯಕ್ಷ, ಸಂಪಾಜೆ ಪಯಸ್ವಿನಿ ಪ್ರಾ.ಕೃ.ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಚೆಂಬು ಗ್ರಾಮದ ಅತ್ಯಂತ ಜನಪ್ರಿಯ ಸಮಾಜ ಸೇವಕರೆಂದು ಪರಿಗಣಿತರಾಗಿರುವ ಆದಂ ಕುಂಞಿ ಸಂಟ್ಯಾರ್‌ರವರು ಹೃದಯಾಘಾತದಿಂದ ಇದೀಗ ನಿಧನರಾಗಿದ್ದಾರೆ. ಅವರಿಗೆ ೬೦ ವರ್ಷ ವಯಸ್ಸಾಗಿತ್ತು. ಇಂದು ಸಂಪಾಜೆಯಲ್ಲಿ ಪಯಸ್ವಿನಿ ಸಹಕಾರಿ ಬ್ಯಾಂಕ್‌ನ ಮಹಾಸಭೆ ನಡೆಯುತ್ತಿತ್ತು. ಆದಂರವರು ಮಹಾಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಮಾತನಾಡುತ್ತಿದ್ದ ವೇಳೆ ಅವರಿಗೆ ಹೃದಯಾಘಾತವಾಗಿ ಕುಸಿದು ಕುಳಿತರೆನ್ನಲಾಗಿದೆ. ತಕ್ಷಣವೇ ಅವರನ್ನು ಕಾರಲ್ಲಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಚಿಕಿತ್ಸೆ ನೀಡುತ್ತಿರುವಂತೆಯೇ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.